ಜಪಾನ್ ಮಾಜಿ ಪ್ರಧಾನಿ ಶಿಂಜೋ ಅಬೆಗೆ ಗುಂಡೇಟು: ಚಿಕಿತ್ಸೆ ಫಲಿಸದೇ ಸಾವು.  

ಜಪಾನ್, ಜುಲೈ ,8, 2022(www.justkannada.in): ಜಪಾನ್‍ ನ ಮಾಜಿ ಪ್ರಧಾನಿ ಶಿಂಜೋ ಅಬೆ ಅವರು ಪಶ್ಚಿಮ ಜಪಾನ ನಾರಾದಲ್ಲಿ ಚುನಾವಣೆ ಪ್ರಚಾರ ಭಾಷಣದ ವೇಳೆ ಗುಂಡು ಹಾರಿಸಿ ಹತ್ಯೆ ಮಾಡಲಾಗಿದೆ.

ಪಶ್ಚಿಮ ಜಪಾನಿನ ನಾರ ನಗರದಲ್ಲಿ ಜಪಾನಿನ ಮಾಜಿ ಪ್ರಧಾನಿ ಶಿಂಜೋ ಅಬೆ ಸಾರ್ವಜನಿಕ ಭಾಷಣ ಮಾಡುತ್ತಿದ್ದ ವೇಳೆ ಗುಂಡಿನ ದಾಳಿ ನಡೆದಿದ್ದು ಈ ವೇಳೆ ವೇದಿಕೆ ಮೇಲೆ ಕುಸಿದು ಬಿದ್ದಿದ್ದರು.  ನಂತರ ಅವರನ್ನ ಆಸ್ಪತ್ರೆಗೆ ರವಾನಿಸಲಾಗಿತ್ತು. ಆದರೆ ಚಿಕಿತ್ಸೆ ಫಲಿಸದೆ ಶಿಂಜೋ ಅಬೆ ಮೃತಪಟ್ಟಿದ್ದು ಸಾವಿನ ಬಗ್ಗೆ ಜಪಾನ್ ಸರ್ಕಾರ ದೃಢಪಡಿಸಿದೆ. ಘಟನೆ ಸಂಬಂಧ ಓರ್ವನನ್ನ ಬಂಧಿಸಲಾಗಿದೆ.

ಶಿಂಜೋ ಅಬೆ ಅವರು ಜಪಾನ್‌ನ ಅತೀ ದೀರ್ಘ ಅವಧಿಯವರೆಗೆ ಪ್ರಧಾನಿಯಾಗಿ ಸೇವೆ ಸಲ್ಲಿಸಿರುವ ಪ್ರಧಾನ ಮಂತ್ರಿಯಾಗಿದ್ದು, ಅನಾರೋಗ್ಯದ ಹಿನ್ನೆಲೆಯಲ್ಲಿ 2020ರಲ್ಲಿ ತಮ್ಮ ಪದವಿಯನ್ನು ತ್ಯಜಿಸಿದರು. ಆದರೆ ಅಧಿಕಾರದಲ್ಲಿರುವ ಅಲ್ಲಿನ ಲಿಬರಲ್ ಡೆಮೊಕ್ರಾಟಿಕ್ ಪಾರ್ಟಿ (ಎಲ್‌ಡಿಪಿ)ಯಲ್ಲಿ ಬಲಿಷ್ಠ ಅಸ್ತಿತ್ವನ್ನು ಹೊಂದಿದ್ದು, ಈ ಪಕ್ಷದ ಪ್ರಮುಖ ಬಣಗಳ ಮೇಲೆ ನಿಯಂತ್ರಣ ಹೊಂದಿದ್ದಾರೆ.

ಶಿಂಜೋ ಅಬೆ ನಿಧನಕ್ಕೆ ಪ್ರಧಾನಿ ಮೋದಿ ಸಂತಾಪ ಸೂಚಿಸಿದ್ದಾರೆ. ಭಾರತದೊಂದಿಗೆ ಬಹಳ ಉತ್ತಮ ಒಡನಾಟ ಹೊಂದಿದ್ದ ಜಪಾನ್ ಮಾಜಿ ಪ್ರಧಾನಿ ಶಿಂಜೋ ಅಬೆ ಅವರ ಗೌರವಾರ್ಥ ಶನಿವಾರ ಒಂದು ದಿನ ರಾಷ್ಟ್ರೀಯ ಶೋಕಾಚರಣೆ ನಡೆಸಲು ಆದೇಶಿಸಿರುವುದಾಗಿ ಪ್ರಧಾನಿ ನರೇಂದ್ರ ಮೋದಿ ಘೋಷಿಸಿದ್ದಾರೆ.

Key words: Japan- Former Prime Minister -Shinzo Abe- Death