ಕಾಂಗ್ರೆಸ್ ನಲ್ಲಿ ಈಗಲೇ ಕುರ್ಚಿಗಾಗಿ ಕಚ್ಚಾಟ: ಬೊಮ್ಮಾಯಿ ಆಡಳಿತಕ್ಕೆ ಜನ ಮಾರು ಹೋಗಿದ್ದಾರೆ- ಸಚಿವ ಡಾ.ಕೆ.ಸುಧಾಕರ್.

ಬೆಂಗಳೂರು,ಸೆಪ್ಟಂಬರ್,10,2022(www.justkannada.in): ಕಾಂಗ್ರೆಸ್ ನಲ್ಲಿ ಕುರ್ಚಿಗಾಗಿ ಈಗಾಗಲೇ ಕಚ್ಚಾಡುತ್ತಿದ್ದಾರೆ. ಇತ್ತ ಜನಸಾಮಾನ್ಯರು ಸಿಎಂ ಬಸವರಾಜ ಬೊಮ್ಮಾಯಿ ಅವರ ಆಡಳಿತಕ್ಕೆ ಮಾರು ಹೋಗಿದ್ದಾರೆ ಎಂದು ಆರೋಗ್ಯ ಸಚಿವ ಡಾ.ಕೆ.ಸುಧಾಕರ್ ನುಡಿದರು.

ದೊಡ್ಡಬಳ್ಳಾಪುರದಲ್ಲಿ ನಡೆಯುತ್ತಿರುವ ಜನಸ್ಪಂದನ ಕಾರ್ಯಕ್ರಮದಲ್ಲಿ ಮಾತನಾಡಿದ ಸಚಿವ ಸುಧಾಕರ್, ಬಯಲುಸೀಮೆ ಅಂದರೇ ಕೆಂಪೇಗೌಡರು ನೆನಪಾಗುತ್ತಾರೆ. ಕೆಂಪೇಗೌಡರಿಗೆ ಜನ್ಮ ನೀಡಿದ ಪುಣ್ಯಭೂಮಿ ಇದು. ಇತಿಹಾಸದಲ್ಲಿ ಇಂತಹದೊಂದು ಸಮಾವೇಶ ನಡೆದಿರಲಿಲ್ಲ.  ಸಂಕಷ್ಟದ ಸಮಯದಲ್ಲಿ ಬಿಎಸ್ ವೈ ಉತ್ತಮವಾಗಿ ಕೆಲಸ ಮಾಡಿದ್ದಾರೆ. ಬೊಮ್ಮಾಯಿ ಇದೇ ಹಾದಿಯಲ್ಲಿ ದಿಟ್ಟ ಹೆಜ್ಜೆಯನ್ನಿಡುತ್ತಿದ್ದಾರೆ. ಬಿಜೆಪಿ ಅಂದರೇ ಕಾರ್ಯಕರ್ತರ ಪಕ್ಷ.  ಬೊಮ್ಮಾಯಿ ಆಡಳಿತಕ್ಕೆ ಜನಸಾಮಾನ್ಯರು ಮಾರು ಹೋಗಿದ್ದಾರೆ ಎಂದರು.

ಇದು ಯಾವ ವ್ಯಕ್ತಿಯ ಉತ್ಸವ ಅಲ್ಲ. ನಮ್ಮ ಸರ್ಕಾರದ ಸಾಧನೆ ಅನಾವರಣಗೊಳಿಸುವ ಕಾರ್ಯಕ್ರಮ. ನಮ್ಮ ರಿಪೋರ್ಟ್ ಕಾರ್ಡ್  ಜನರ ಮುಂದೆ ಇಡುತಿದ್ದೇವೆ.  ರೈತರ ಮಕ್ಕಳನ್ನ ಸಬಲೀಕರಣ ಮಾಡಲು ಕ್ರಮ ಕೈಗೊಂಡಿದ್ದೇವೆ. ರೈತ ಮಕ್ಕಳ ಸಬಲೀಕರಣಕ್ಕೆ ಬೊಮ್ಮಾಯಿ ಉತ್ತಮ ಕೆಲಸ  ಮಾಡಿದ್ದಾರೆ.  10 ಲಕ್ಷ ರೈತರ ಮಕ್ಕಳಿಗೆ  ವಿದ್ಯಾನಿಧಿ ಯೋಜನೆ ಜಾರಿ ಮಾಡಿದ್ದಾರೆ. ಪ್ರತಿಯೊಬ್ಬರಿಗೂ ಆರೋಗ್ಯ ವಿಮೆ ಉಚಿತವಾಗಿ ಮಾಡಲಾಗಿದೆ. ನಮ್ಮ ಸರ್ಕಾರ ಜನರ ಪರ ಕೆಲಸ ಮಾಡುತ್ತಿದೆ. ಮನೆ ಇಲ್ಲದವರಿಗೆ ಮೂರು ಕೋಟಿ ಮನೆಗಳನ್ನ ನೀಡಲಾಗುತ್ತಿದೆ ಎಂದು ಸಚಿವ ಸುಧಾಕರ್ ತಿಳಿಸಿದರು.

ಬಿಜೆಪಿ ಡಬಲ್ ಇಂಜಿನ್ ಪಕ್ಷ,  ಕಾಂಗ್ರೆಸ್  ಡಬಲ್ ಸ್ಟೇರಿಂಗ್ ಪಕ್ಷ. ಡಬಲ್ ಇಂಜಿನ್ ನಮ್ಮ ಪಕ್ಷ ಬೇಕಾ. ಡಬಲ್ ಸ್ಟೇರಿಂಗ್ ಕಾಂಗ್ರೆಸ್ ಬೇಕಾ..?  ಎಂದು ಜನರಿಗೆ ಪ್ರಶ್ನಿಸಿದ ಸಚಿವ ಸುಧಾಕರ್,  ಕಾರ್ಯಕ್ರಮದ ಜನಸಮೂಹ ನೋಡಿ ಕಾಂಗ್ರೆಸ್ ಗೆ ಭಯವಾಗಿದೆ. ರಾಜ್ಯದಲ್ಲಿ 12 ಕೋಟಿ ಡೋಸ್ ಲಸಿಕೆ ನೀಡಿದ್ದೇವೆ ಎಂದು ತಿಳಿಸಿದರು.

Key words: janaspandana-minister-Dr.k.sudhakar-Bommai -administration.