ಜೆ&ಕೆ ವಿಶೇಷ ಸ್ಥಾನಮಾನ ರದ್ದು Updates: ಮೋದಿ-ಅಮಿತ್ ಶಾ ಐತಿಹಾಸಿಕ ನಿರ್ಧಾರ: ಕೋಲಾಹಲ ಎಬ್ಬಿಸಿದ ಪ್ರತಿಪಕ್ಷಗಳು

ನವದೆಹಲಿ, ಆಗಸ್ಟ್ 05, 2019 (www.justkannada.in): ಜಮ್ಮು ಕಾಶ್ಮೀರದ 35a, 375 ವಿಶೇಷ ಸ್ಥಾನಮಾನ ರದ್ದುಗೊಳಿಸುವ ಪ್ರಧಾನಿ ನರೇಂದ್ರ ಮೋದಿ ಹಾಗೂ ಅಮಿತ್ ಶಾ ಐತಿಹಾಸಿಕ ನಿರ್ಧಾರಕ್ಕೆ ಪ್ರತಿಪಕ್ಷಗಳು ತೀವ್ರ ವಿರೋಧ ವ್ಯಕ್ತಪಡಿಸುತ್ತಿವೆ.

ಇಂದು ಐತಿಹಾಸಿಕ ನಿರ್ಧಾರವನ್ನು ಅಮಿತ್ ಶಾ ಮಂಡಿಸುತ್ತಿದ್ದಂತೆ ರಾಜ್ಯಸಭೆಯಲ್ಲಿಂದು ಕಾಂಗ್ರೆಸ್ ಸೇರಿದಂತೆ ಪ್ರತಿಪಕ್ಷಗಳು ಕೋಲಾಹಲ ಎಬ್ಬಿಸಿವೆ. ಇನ್ನು ಜಮ್ಮು ಮತ್ತು ಕಾಶ್ಮೀರದಲ್ಲಿ ಕೇಂದ್ರ ಸರ್ಕಾರ ಭಾರೀ ಪ್ರಮಾಣದಲ್ಲಿ ಭದ್ರತಾ ಪಡೆಗಳನ್ನು ನಿಯೋಜಿಸಿದೆ.ಅಮರನಾಥ ಯಾತ್ರೆ ರದ್ದುಪಡಿಸುವುದರ ಜೊತೆಗೆ ಪ್ರವಾಸಿಗಳಿಗೆ ರಾಜ್ಯದಿಂದ ಹೊರಗೆ ಹೋಗುವಂತೆ ಸೂಚಿಸಲಾಗಿದೆ.

ಕಾಶ್ಮೀರದ ಪ್ರಮುಖ ನಾಯಕರಾದ ಮುಫ್ತಿ ಮೊಹಮದ್ ಸಯೀದ್ ಮತ್ತು ಒಮರ್ ಅಬ್ದುಲ್ಲಾ ಅವರನ್ನು ಗೃಹಬಂಧನದಲ್ಲಿ ಇರಿಸಲಾಗಿದೆ. ಕಾಶ್ಮೀರದಲ್ಲಿ ಮಹತ್ತರವಾದುದು ಏನೋ ನಡೆಯಲಿದೆ ಎನ್ನುವ ಭಾವನೆ ದೇಶದಲ್ಲಿ ದಟ್ಟವಾಗಿದೆ.