ಕಾಶ್ಮೀರಿ ಫೈಲ್ಸ್ ಚಿತ್ರದಿಂದ ಜೇಮ್ಸ್ ಸಿನಿಮಾಗೆ ತೊಂದರೆ ಇಲ್ಲ- ನಟ ಶಿವರಾಜ್ ಕುಮಾರ್.

ಬೆಂಗಳೂರು,ಮಾರ್ಚ್,24,2022(www.justkannada.in):  ‘ಜೇಮ್ಸ್‌ ಚಿತ್ರಕ್ಕೂ ದಿ ಕಾಶ್ಮೀರ್ ಫೈಲ್ಸ್‌ ಸಿನಿಮಾಗೂ ಯಾವುದೇ ಸಂಬಂಧವಿಲ್ಲ. ದಿ ಕಾಶ್ಮೀರ್ ಫೈಲ್ಸ್ ಚಿತ್ರದಿಂದ ಜೇಮ್ಸ್‌  ಸಿನಿಮಾಗೆ ಯಾವುದೇ ತೊಂದರೆ ಇಲ್ಲ ಎಂದು ನಟ ಶಿವರಾಜ್ ಕುಮಾರ್ ತಿಳಿಸಿದರು.

ಇಂದು ನಟ ಶಿವರಾಜ್​ಕುಮಾರ್​ ಅವರು  ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರನ್ನು ಭೇಟಿ ಮಾಡಿ ಚರ್ಚಿಸಿದರು. ಬಳಿಕ ಮಾಧ್ಯಮಗಳ ಜತೆ ಮಾತನಾಡಿದ ನಟ ಶಿವಣ್ಣ, ‘ಜೇಮ್ಸ್‌ ಚಿತ್ರಕ್ಕೂ ದಿ ಕಾಶ್ಮೀರ್ ಫೈಲ್ಸ್‌ ಸಿನಿಮಾಗೂ ಯಾವುದೇ ಸಂಬಂಧವಿಲ್ಲ. ದಿ ಕಾಶ್ಮೀರ್ ಫೈಲ್ಸ್ ಚಿತ್ರದಿಂದ ಜೇಮ್ಸ್‌  ಗೆ ತೊಂದರೆಯಿಲ್ಲ. ‘ನಾನು ರಾಜಕಾರಣಿಯಾಗಿ ಈ ಮಾತನ್ನು ಹೇಳುತ್ತಿಲ್ಲ. ಒಬ್ಬ ನಟನಾಗಿ ನಾನು ಈ ಮಾತನ್ನು ಹೇಳುತ್ತಿದ್ದೇನೆ. ಕನ್ನಡ ಸಿನಿಮಾಗೆ ತೊಂದರೆ ಆದರೆ ನಾನು ಮುಂದಿರುತ್ತೇನೆ. ಒಳ್ಳೆಯ ಕಲೆಕ್ಷನ್ ಇದ್ದರೆ ಏಕೆ ಸಿನಿಮಾ ತೆಗೆಯಬೇಕು. ಸಮಸ್ಯೆ ಬಂದಾಗ ಹೋರಾಡಿ ಬಗೆಹರಿಸಿಕೊಳ್ಳಬೇಕಾಗಿದೆ. ನಮ್ಮ ಭಾಷೆ ವಿಚಾರ ಬಂದಾಗ ನಾವು ಮುಂದಿರಬೇಕು ಎಂದರು.

ನಮ್ಮ ಕನ್ನಡ ಚಿತ್ರಗಳನ್ನ ಬಿಟ್ಟುಕೊಡಬಾರದು.  ಕನ್ನಡ ಸಿನಿಮಾಗೆ ತೊಂದರೆ ನಾನು ಮುಂದಿರುತ್ತೇನೆ.  ನಮ್ಮ ಭಾಷೆ ವಿಚಾರ ಬಂದಾಗ ಕನ್ನಡಕ್ಕೆ ಬೆಂಬಲ ನೀಡುತ್ತೇನೆ. ಜೇಮ್ಸ್ ಗೆ ಅನ್ಯಾಯ ಆಗಲು ಬಿಡುವುದಿಲ್ಲ.  ಸಿಎಂ ಬೊಮ್ಮಾಯಿ ಭರವಸೆ ಕೊಟ್ಟಿದ್ದಾರೆ. ಅಭಿಮಾನಿಗಳು ಯಾರೂ ಪ್ರತಿಭಟನೆ ಮಾಡಬೇಡಿ ಎಂದು ಮನವಿ ಮಾಡಿದರು.

Key words: James-Kashmiri Files-Actor -Shivaraj Kumar.