ಮೈಸೂರು,ಅಕ್ಟೋಬರ್,2,2025 (www.justkannada.in): ಮೈಸೂರು ದಸರಾದ ಪಾಸ್ ಗಳ ವಿತರಣೆಯಲ್ಲಿ ಗೊಂದಲಗಳು ವರ್ಷ ವರ್ಷ ಸಾಮಾನ್ಯವಾಗಿಬಿಟ್ಟಿದೆ. ಇದೀಗ ಐತಿಹಾಸಿಕ ಜಂಬೂಸವಾರಿಯ ಪಾಸ್ ಗಳು ಕಾಳಸಂತೆಯಲ್ಲಿ ಮಾರಾಟ ಮಾಡಲಾಗಿದೆ.
ಹೌದು ದಸರಾ ಮಹೋತ್ಸವದ ಜಂಬೂಸವಾರಿ ಪಾಸುಗಳನ್ನು ಯುವಕನೊಬ್ಬ ಕಾಳಸಂತೆಯಲ್ಲಿ ಮಾರಾಟ ಮಾಡುತ್ತಿದ್ದ ದೃಶ್ಯ ವೈರಲ್ ಆಗಿದೆ. ನಗರದ ಜಗನ್ಮೋಹನ ಅರಮನೆ ಎದುರಿನ ಬ್ರಹ್ಮಪುರಿ ಗೇಟ್ ಬಳಿ ಯುವಕನೊಬ್ಬ ಜಂಬೂಸವಾರಿ ಮೆರವಣಿಗೆ ಪಾಸ್ ಗಳನ್ನ ಕೈಯಲ್ಲಿ ಹಿಡಿದು ಮಾರಾಟ ಮಾಡಿದ್ದು ಇದು ಇದೀಗ ಸಾಕಷ್ಟು ಚರ್ಚೆಗೆ ಗ್ರಾಸವಾಗಿದೆ.
Key words: Mysore Dasara, Jambu Savari, passes ,sale