ಉತ್ತಮ ಚಲನಚಿತ್ರಗಳು ರೈಟಿಂಗ್ ಮತ್ತು ಎಡಿಟಿಂಗ್ ಎಂಬ ಎರಡು ಟೇಬಲ್‌ ಗಳ ಮೇಲೆ ರೂಪುಗೊಳ್ಳುತ್ತವೆ,- ಶ್ರೀ ಕ್ರೇಜಿ ಮೈಂಡ್ಸ್

ಬೆಂಗಳೂರು, ಏಪ್ರಿಲ್ ,22, 2026 (www.justkannada.in): ಉತ್ತಮ ಚಲನಚಿತ್ರಗಳು ರೈಟಿಂಗ್ ಮತ್ತು ಎಡಿಟಿಂಗ್ ಎಂಬ ಎರಡು ಟೇಬಲ್‌ ಗಳ ಮೇಲೆ ರೂಪುಗೊಳ್ಳುತ್ತವೆ ಎಂದು ಶ್ರೀ ಕ್ರೇಜಿ ಮೈಂಡ್ಸ್ ತಿಳಿಸಿದರು.

ಜೈನ್ (ಡೀಮ್ಸ್-ಟು-ಬಿ ಯುನಿವರ್ಸಿಟಿ), ಪತ್ರಿಕೋದ್ಯಮ ಮತ್ತು ಸಮೂಹ ಸಂವಹನ ವಿಭಾಗದ ವತಿಯಿಂದ ಆಯೋಜಿಸಲಾದ ‘ಜೈನ್ ಯುನಿವರ್ಸಿಟಿ ಕಿರುಚಿತ್ರೋತ್ಸವ 2026’ರ ಮೂರನೇ ಆವೃತ್ತಿಯ ಈ ಕಾರ್ಯಕ್ರಮದಲ್ಲಿ ಭಾಗವಹಿಸಿ ಶ್ರೀ ಕ್ರೇಜಿ ಮೈಂಡ್ಸ್ ಮಾತನಾಡಿದರು.

ಕನ್ನಡ ಫಿಲ್ಮ ಫೇರ್ ಪ್ರಶಸ್ತಿ ವಿಜೇತ ನಟ ನವೀನ್ ಶಂಕರ್ ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದರು. ಜೊತೆಗೆ ಡಾ. ದಿನೇಶ್ ನೀಲಕಂತ್, ಡಾ. ಕಿರಣ್ ಎಸ್, ಡಾ. ಸಂಗೀತಾ ದೇವನಾಥನ್ ಮತ್ತು ಡಾ. ಭಾರ್ಗವಿ ಡಿ. ಹೆಮ್ಮಿಗೆ ಅವರುಗಳೂ ಉಪಸ್ಥಿತರಿದ್ದರು.

ಜೈನ್ ವಿಶ್ವವಿದ್ಯಾಲಯದ ಕಿರು ಚಲನಚಿತ್ರೋತ್ಸವದ ತೀರ್ಪುಗಾರರ ಸಮಿತಿಯ ಭಾಗವಾಗಿ, ಲವ್ ಮಾಕ್ಟೇಲ್ ಸರಣಿಯ ಸಂಪಾದಕ ಮತ್ತು ಛಾಯಾಗ್ರಾಹಕ ಶ್ರೀ ಕ್ರೇಜಿ ಮೈಂಡ್ಸ್, “ಒಂದು ಅತ್ಯುತಮ್ಮ ಚಲನಚಿತ್ರವು ಎರಡು ಟೇಬಲ್‌ ಗಳ ಮೇಲೆ ರೂಪುಗೊಳ್ಳುತ್ತದೆ, ಒಂದು ಅಸಾಧಾರಣ ಕಥೆಗಾಗಿ ಬರವಣಿಗೆಯ ಟೇಬಲ್ ಮತ್ತು ಚಲನಚಿತ್ರಕ್ಕೆ ಜೀವ ತುಂಬಲು ಎಡಿಟಿಂಗ್ ಟೇಬಲ್.” ಬೆಳ್ಳಿತೆರೆಯ ಉದ್ಯಮದಲ್ಲಿ ಕೃತಕ ಬುದ್ಧಿಮತ್ತೆಯ (AI) ಪಾತ್ರದ ಬಗ್ಗೆ ವಿಸ್ತರಿಸುತ್ತಾ, “AI ಎಂದಿಗೂ ಮಾನವ ಭಾವನೆಗಳ ಸಂಕೀರ್ಣತೆಗಳನ್ನು ಅನುಕರಿಸಲು ಸಾಧ್ಯವಿಲ್ಲ ಮತ್ತು ಸಿನಿಮಾ ಉದ್ಯಮದ ಅವಿಭಾಜ್ಯ ಅಂಗವಾಗಲು ಅದು ಇನ್ನೂ ಒಂದು ದಶಕ ಬೆಕಾಗಿದೆ” ಎಂದರು.

ಜೈನ್ (ಪರಿಗಣಿತ ವಿಶ್ವವಿದ್ಯಾಲಯ) ಸಮೂಹದ ಮುಖ್ಯ ಶೈಕ್ಷಣಿಕ ಅಧಿಕಾರಿ ಡಾ. ಶ್ರದ್ಧಾ ಕನ್ವರ್ ಅವರು ಸಭೆಯನ್ನುದ್ದೇಶಿಸಿ ಮಾತನಾಡಿ, ಸೃಜಿಸುವ ಸಾಮರ್ಥ್ಯ, ವಿಷಯಗಳನ್ನು ವ್ಯವಸ್ಥಿತವಾಗಿ ಜೋಡಿಸುವ ಕೌಶಲ, ಸೂಕ್ಷ್ಮ ವ್ಯತ್ಯಾಸಗಳನ್ನು ಗುರುತಿಸುವ ವಿವೇಚನೆ, ದತ್ತಾಂಶವನ್ನು ಆಯ್ಕೆ ಮಾಡಿ ನಂತರ ಅದನ್ನು ಸಂಯೋಜಿಸುವ ಶಕ್ತಿಯು ಭವಿಷ್ಯದಲ್ಲಿ ಅತ್ಯಂತ ಅವಶ್ಯಕವಾಗಲಿದೆ. ಒಂದು ಎಐ (AI) ನಿಮಗಾಗಿ ಹಲವಾರು ಸ್ಕ್ರಿಪ್‌ಗಳನ್ನು ಸಿದ್ಧಪಡಿಸಿಕೊಡಬಹುದು, ಆದರೆ ಅದರ ಪರಿಣಾಮಕಾರಿ ಅನುಷ್ಠಾನ ಮತ್ತು ಅದನ್ನು ಹೆಚ್ಚು ಪ್ರಭಾವಶಾಲಿಯಾಗಿಸುವ ಸಾಮರ್ಥ್ಯವು ಇಂದಿಗೂ ನಿಮ್ಮ ಮಾನವ ವಿವೇಚನೆಯಲ್ಲಿಯೇ ಅಡಗಿದ ಎಂದರು.

ಚಲನಚಿತ್ರ ನಟ ಮತ್ತು ಕನ್ನಡ ಫಿಲಂಫೇರ್ ವಿಜೇತ ನವೀನ್ ಶಂಕರ್ ಮಾತನಾಡಿ,  “ಇಂತಹ ಚಿತ್ರೋತ್ಸವಗಳು ನಮಗೆ ಸಿನೆಮಾ ದೊಡ್ಡ ಪರದೆಗಳ ಬಗ್ಗೆ ಮಾತ್ರವಲ್ಲ, ಅದು ಆಲೋಚನೆಗಳು, ಉತ್ಸಾಹ ಮತ್ತು ಆರಂಭಿಸಲು ಬೇಕಾದ ಧೈರ್ಯದ ಬಗ್ಗೆ ಎಂಬುದನ್ನು ನೆನಪಿಸುತ್ತವೆ. ಕಾಲೇಜು ಕ್ಯಾಂಪಸ್‌ನಲ್ಲಿ ಸಣ್ಣ ಪ್ರಯತ್ನವಾಗಿ ಆರಂಭವಾದುದು. ಮುಂದೆ ಮಹತ್ವದ ಸಾಧನೆಗೆ ದಾರಿ ಮಾಡಿಕೊಡಬಹುದು. ವಿದ್ಯಾರ್ಥಿಗಳಿಗೆ ತಮ್ಮ ಸೃಜನಶೀಲತೆಯನ್ನು ಅನ್ವೇಷಿಸಲು ಮತ್ತು ತಮ್ಮದೇ ಆದ ಧ್ವನಿಯನ್ನು ನಿರ್ಮಿಸಲು ಅವಕಾಶ ಸಿಗುತ್ತಿರುವುದು ಸಂತೋಷಕರ ವಿಷಯ ” ಎಂದರು.

“ವಿಶೇಷವಾಗಿ ಚಿಕ್ಕಚಿತ್ರಗಳು, ಆಶಾವದಿ ಚಲನಚಿತ್ರ ನಿರ್ಮಾಪಕರಿಗೆ ಪ್ರಯೋಗ ಮಾಡಲು, ಕಲೆಯ ಅರ್ಥವನ್ನು ತಿಳಿದುಕೊಳ್ಳಲು ಮತ್ತು ಸಿನೆಮಾದ ಮೂಲಭೂತ ವಾಸ್ತವಿಕತೆಗಳನ್ನು ಅನುಭವಿಸಲು ಉತ್ತಮ ವೇದಿಕೆಯಾಗಿವೆ. ಇಂತಹ ಪ್ರತಿಭೆಯನ್ನು ಪ್ರದರ್ಶಿಸಲು ಮತ್ತು ವಿದ್ಯಾರ್ಥಿಗಳನ್ನು ಚಿತ್ರರಂಗದೊಂದಿಗೆ ಸಂಪರ್ಕಿಸಲು ಜೈನ್ ವಿಶ್ವವಿದ್ಯಾಲಯ ಕೈಗೊಂಡಿರುವ ಈ ಕಾರ್ಯ ಶ್ಲಾಘನೀಯ,” ಎಂದು ಹೇಳಿದರು.

ಪ್ರೊ-ವೈಸ್ ಚಾನ್ಸಲರ್ ಜೈನ್ (ಡೀಮ್ಸ್-ಟು-ಬಿ ಯುನಿವರ್ಸಿಟಿ) ಡಾ. ದಿನೇಶ್ ನೀಲಕಂಠ ಅವರು ಮಾತನಾಡಿ, “ಉತ್ತಮ ಪ್ರತಿಭೆಗಳು ದೊಡ್ಡ ಸ್ಟುಡಿಯೊಗಳಿಂದ ಅಲ್ಲ, ಕಾಲೇಜುಗಳು ಮತ್ತು ವಿಶ್ವವಿದ್ಯಾಲಯಗಳಿಂದಲೇ ಬೆಳೆಯುತ್ತವೆ. ನಾವು ಇಂತಹ ವೇದಿಕೆಗಳನ್ನು ನಿರ್ಮಿಸುತ್ತಿದ್ದೇವೆ,” ಎಂದು ಹೇಳಿದರು.

ಕಿರುಚಿತ್ರಗಳ ಬೆಳವಣಿಗೆ ಕುರಿತು ಮಾತನಾಡಿದ ಡಾ. ಕಿರಣ್ ಎಸ್, ಡೆಪ್ಯೂಟಿ ಡೀನ್ (ಅಕಾಡೆಮಿಕ್ಸ್) ಜೈನ್ (ಡೀಮ್ಸ್-ಟು-ಬಿ ಯುನಿವರ್ಸಿಟಿ), “ಚಿಕ್ಕಚಿತ್ರಗಳು ಇನ್ನು ಕೇವಲ ಮೆಟ್ಟಿಲುಗಳಲ್ಲ, ಅವು ಸ್ವತಂತ್ರವಾಗಿ ಶಕ್ತಿಯುತ ಕಥನ ಮಾಧ್ಯಮಗಳಾಗಿವೆ,’ ಎಂದು ಹೇಳಿದರು.

ಡಾ. ಸಂಗೀತಾ ದೇವನಾಥನ್ ಡೆಪ್ಯೂಟಿ ಡೀನ್ (ಅಕಾಡೆಮಿಕ್ಸ್) ಪ್ರಾಧ್ಯಾಪಕರು, ಜೈನ್ (ಡೀಮ್ಸ್-ಟು-ಬಿ ಯುನಿವರ್ಸಿಟಿ) ಅವರು ಸೃಜನಾತ್ಮಕ ಚಿಂತನೆಯ ಅಗತ್ಯವನ್ನು ಉಲ್ಲೇಖಿಸಿ, “ಆಲೋಚನಾತ್ಮಕ ಚಿಂತನೆಗೆ ಸೃಜನಾತ್ಮಕತೆ ಅಗತ್ಯ,” ಎಂದು ಹೇಳಿದರು. ಅವರು ಮುಂದುವರೆದು, “ಇಂದಿನ ಕಾಲದಲ್ಲಿ ಎರಡು ಅಥವಾ ಮೂರು ಗಂಟೆಗಳ ಸಿನಿಮಾ ನೋಡುವ ಅಭ್ಯಾಸ ಕಡಿಮೆಯಾಗುತ್ತಿದೆ. ಕಿರುಚಿತ್ರಗಳು ಈ ಕಲೆಯ ಭವಿಷ್ಯವಾಗಿವೆ.” ಎಂದು ಹೇಳಿದರು.

ಜ್ಯೂರಿ ಸದಸ್ಯರಾದ ನಿರ್ಮಾಪಕ, ನಿರ್ದೇಶಕ ಮತ್ತು ನಾಟಕ ಕಲಾವಿದ ನವೀನ್ ದ್ವಾರಕನಾಥ್ ಅವರು ಮಾತನಾಡಿ, “ಯುವ ನಿರ್ಮಾಪಕರಲ್ಲಿ ಕಥನದ ಗುಣಮಟ್ಟವು ಸ್ಪಷ್ಟವಾಗಿ ಹೆಚ್ಚುತ್ತಿದೆ. ಸಿನೆಮಾ ಜನರನ್ನು ಸಂಪರ್ಕಿಸುತ್ತದೆ ಮತ್ತು ಭಾವನಾತ್ಮಕ ಬಾಂಧವ್ಯವನ್ನು ನಿರ್ಮಿಸುತ್ತದೆ,” ಎಂದು ಹೇಳಿದರು.

ಈ ಎರಡು ದಿನಗಳ ಅದ್ಭುತ ಸಿನಿಮಾ ಸಂಭ್ರಮವು ಅತ್ಯಂತ ಆಕರ್ಷಕವಾಗಿ ಮುಕ್ತಾಯಗೊಂಡಿತು. ವೃತ್ತಿಪರ ವಿಭಾಗದಲ್ಲಿ (ವೃತ್ತಿಪರ ವಿಭಾಗ) ಮಿಥುನ್ ರಾಮಸ್ವಾಮಿ ನಿರ್ದೇಶನದ “ಸಾಲ್ಟ್” ಚಿತ್ರವು ವಿಜೇತವಾಗಿ ಹೊರಹೊಮ್ಮಿದೆ, (ವಿದ್ಯಾರ್ಥಿ ವಿಭಾಗದಲ್ಲಿ) ಅಂಜು ಸಿದ್ದಾರತ್ ನಿರ್ದೇಶನದ “ಲವ್ ಡೇ” ಚಿತ್ರವು ಪ್ರಶಸ್ತಿಯನ್ನು ತನ್ನದಾಗಿಸಿಕೊಂಡಿತು.

Key words: Good films,  two tables, Mr. Crazy Minds, Jain Deems-to-be University