ಬಿಜೆಪಿ ಕಾರ್ಯಕರ್ತರ ಆಧಾರಿತ ಪಕ್ಷ: ಪಕ್ಷ ಬಿಡುವ ಮುನ್ನ ಇಬ್ಬರು ನಾಯಕರು ಯೋಚಿಸಬೇಕಿತ್ತು- ಅರುಣ್ ಸಿಂಗ್.

ಬೆಳಗಾವಿ,ಏಪ್ರಿಲ್,20,2023(www.justkannada.in):  ಟಿಕೆಟ್ ಕೈತಪ್ಪಿದ ಹಿನ್ನೆಲೆ ಮಾಜಿ ಸಿಎಂ ಜಗದೀಶ್ ಶೆಟ್ಟರ್ ಮತ್ತು ಮಾಜಿ ಡಿಸಿಎಂ ಲಕ್ಷ್ಮಣ್ ಸವದಿ ಬಿಜೆಪಿ ತೊರೆದು ಕಾಂಗ್ರೆಸ್ ಸೇರ್ಪಡೆಯಾದ ಕುರಿತು ರಾಜ್ಯ ಬಿಜೆಪಿ ಉಸ್ತುವಾರಿ ಪ್ರತಿಕ್ರಿಯಿಸಿದ್ದಾರೆ.

ಈ ಕುರಿತು ಮಾತನಾಡಿರುವ ಅವರು,  ಪಕ್ಷ ಬಿಡುವ ಮುನ್ನ ಇಬ್ಬರು ನಾಯಕರು ಯೋಚನೆ ಮಾಡಬೇಕಿತ್ತು. ಬಿಜೆಪಿಯಲ್ಲಿ ಕಾರ್ಯಕರ್ತರೇ ನಾಯಕರಾಗುತ್ತಾರೆ. ಬಿಜೆಪಿ ಕಾರ್ಯಕರ್ತರ ಆಧಾರಿತ ಪಕ್ಷ. ಕಾಂಗ್ರೆಸ್​​ ಮುಸ್ಲಿಂ ತುಷ್ಟೀಕರಣಕ್ಕಾಗಿ ಕೆಲಸ ಮಾಡುವ ಪಕ್ಷವಾಗಿದೆ. ಕಾಂಗ್ರೆಸ್​ ಮುಳುಗುತ್ತಿರುವ  ಹಡಗು.  ಭಾರತ, ಭಾರತದ ಪ್ರಜಾಪ್ರಭುತ್ವಕ್ಕೆ ಬೈಯುವ ರಾಹುಲ್ ಗಾಂಧಿಯವರ ಪಕ್ಷಕ್ಕೆ ಹೋಗೋದು ಅಂದರೆ ಏನು?  ಎಂದು ಟಾಂಗ್ ನೀಡಿದರು.

Key words: Jagadish shetter-Laxman savadi-left-BJP-Arun singh