ಮೈಸೂರಿನಲ್ಲಿ ಫಿಲ್ಮ್ ಸಿಟಿ ಆದ್ರೆ ಉತ್ತಮ ಎಂದ ನಟ ಯಶ್

ಬೆಂಗಳೂರು, ಮಾರ್ಚ್ 06, 2020 (www.justkannada.in): ಮೈಸೂರಿನಲ್ಲಿ ಫಿಲ್ಮ್ ಸಿಟಿ ಆದರೆ ಒಳ್ಳೆಯದು. ಅಲ್ಲಿ ಜನಸಂಖ್ಯೆ ಕಮ್ಮಿ ಇದೆ. ಟ್ರಾಫಿಕ್ ಕೂಡ ಇರಲ್ಲ. ಇನ್ನು ಮೈಸೂರು ಸಿನಿಮಾಗೆ ಪೂರಕವಾಗಿದೆ ಎಂದು ನಟ ಯಶ್ ಹೇಳಿದ್ದಾರೆ.

ಚಿತ್ರರಂಗದ ಪರವಾಗಿ ಮುಖ್ಯಮಂತ್ರಿಗೆ ಧನ್ಯವಾದ ತಿಳಿಸಿರುವ ಯಶ್, ಫಿಲ್ಮ್ ಸಿಟಿ ಮೈಸೂರಿನಲ್ಲಿ ಆದರೆ ಒಳ್ಳೆಯದಿತ್ತು. ಆದರೆ ಎಲ್ಲಾದರು ಆಗಲಿ ಆದರೆ ರಾಜ್ಯಕ್ಕೆ ಫಿಲ್ಮ್ ಸಿಟಿ ಬೇಕು ಎಂದು ಯಶ್ ಹೇಳಿದ್ದಾರೆ.

ಅಂತರಾಷ್ಟ್ರೀಯ ನಲನಚಿತ್ರೋತ್ಸವದಲ್ಲಿ ಮಾತನಾಡಿದ್ದ ಯಶ್ ಫಿಲ್ಮ್ ಸಿಟಿ ನಿರ್ಮಾಣ ಮಾಡಿ ಎಂದು ಸಿ ಎಂ ಬಳಿ ಮನವಿ ಮಾಡಿಕೊಂಡಿದ್ದರು. ಈ ಬಗ್ಗೆ ಹೇಳಿದ ಯಶ್ ತಕ್ಷಣ ಮಾಡುತ್ತೇನೆ ಎಂದು ಮೊನ್ನೆಯಷ್ಟೆ ಸಿಎಂ ಹೇಳಿದ್ದರು. ಈ ಬಾರಿಯ ಬಜೆಟ್ ನಲ್ಲಿಯೆ ಮಾಡುತ್ತೇನೆ ಎಂದಿದ್ದರು. ಹಾಗೆ ಮಾಡಿದ್ದಾರೆ.