ಬೆಳಗಾವಿ ನಗರದ 5 ಕಡೆ ಏಕಕಾಲದಲ್ಲಿ ಐಟಿ ದಾಳಿ, ದಾಖಲೆ ಪರಿಶೀಲನೆ .

ಬೆಳಗಾವಿ,ನವೆಂಬರ್,8,2021(www.justkannada.in):  ಬೆಳಗಾವಿಯಲ್ಲಿ ಚಿನ್ನದಂಗಡಿ ಮಾಲೀಕರಿಗೆ ಆದಾಯ ತೆರಿಗೆ ಇಲಾಖೆ ಅಧಿಕಾರಿಗಳು ಶಾಕ್ ನೀಡಿದ್ದು ದಾಳಿ ನಡೆಸಿ ದಾಖಲೆ ಪರಿಶೀಲನೆ ನಡೆಸುತ್ತಿದ್ದಾರೆ.

ಬೆಳಗಾವಿ ನಗರದ 5 ಕಡೆ 24ಕ್ಕೂ ಹೆಚ್ಚು ಐಟಿ ಅಧಿಕಾರಿಗಳು ದಾಳಿ ನಡೆಸಿದ್ದಾರೆ. ಪೋತದಾರ್ ಜ್ಯೂವೆಲರ್ಸ್ ಮೇಲೆ ದಾಳಿ ನಡೆಸಲಾಗಿದೆ. ಮಾಲೀಕ ಅನಿಲ್ ಪೋತೆದಾರ್ ಮನೆ ಚಿನ್ನದಂಗಡಿ ಮೇಲೆ ಹಾಗೂ  ಸಹೋದರರಾದ ಸಂಜೀವ್, ರಾಜೀವ್, ಸಹೋದರನ ಮಗನ ನಿವಾಸದ ಮೇಲೆ ದಾಳಿ ನಡೆದಿದೆ. ಪೊಲೀಸ್ ಭದ್ರತೆಯಲ್ಲಿ ಐಟಿ ಅಧಿಕಾರಿಗಳು ಪರಿಶೀಲನೆ ನಡೆಸುತ್ತಿದ್ದಾರೆ.

Key words: IT- raid – Belgaum –city-document- verification.