ಎಲ್ಲರಿಗೂ ಒಂದೇ ಬಾರಿ ಮಂತ್ರಿಯಾಗಬೇಕು ಅಂದ್ರೆ ಅಸಾಧ್ಯ-ಡಿಸಿಎಂ ಗೋವಿಂದ ಕಾರಜೋಳ…..

ಬಾಗಲಕೋಟೆ,ಫೆ,3,2020(www.justkannada.in):  ಫೆಬ್ರವರಿ 6ಕ್ಕೆ ಸಚಿವ ಸಂಪುಟ ವಿಸ್ತರಣೆ ಸಮಯ ನಿಗದಿಯಾಗಿದ್ದು ಈ ನಡುವೆ ಸಚಿವಾಕಾಂಕ್ಷಿಗಳ ಪಟ್ಟು ಜೋರಾಗಿದೆ. ಈ ಹಿನ್ನೆಲೆಯಲ್ಲಿ ಪ್ರತಿಕ್ರಿಯಿಸಿರುವ ಡಿಸಿಎಂ ಗೋವೀಂದ ಕಾರಜೋಳ,  ಎಲ್ಲರಿಗೂ ಒಂದೇ ಬಾರಿ ಮಂತ್ರಿಯಾಗಬೇಕು ಅಂದ್ರೆ ಅಸಾಧ್ಯ ಎಂದು ತಿಳಿಸಿದ್ದಾರೆ.

ಬಾಗಲಕೋಟೆಯಲ್ಲಿ ಇಂದು ಮಾತನಾಡಿದ ಡಿಸಿಎಂ ಗೋವಿಂದ ಕಾರಜೋಳ, ಸಂಪುಟ ವಿಸ್ತರಣೆ ಕುರಿತು, ಸಿಎಂ ಬಿಎಸ್ ವೈ ಹೈಕಮಾಂಡ್ ಜತೆ ಚರ್ಚಿಸಿ ತೀರ್ಮಾನಿಸಿದ್ದಾರೆ. ರಾಷ್ಟ್ರಾಧ್ಯಕ್ಷರು ನಾಯಕರ ಜತೆ ಚರ್ಚಿಸಿ ನಿರ್ಧಾರ ಮಾಡಿದ್ದಾರೆ. ಎಲ್ಲರಿಗೂ ಒಂದೇ ಬಾರಿ ಮಂತ್ರಿಯಾಗಬೇಕು ಅಂದ್ರೆ ಅದು ಅಸಾಧ್ಯ. ಸ್ವಲ್ಪ ದಿನ ಕಾದರ ಅವರಿಗೂ ಸ್ಥಾನ ಸಿಗುತ್ತೆ ಎಂದರು.

10 ವಲಸಿಗರು ಹಾಗೂ ಮೂರು ಮೂಲ ಬಿಜೆಪಿಗರಿಗೆ ಮಂತ್ರಿಗಿರಿ ಸಿಗುತ್ತೆ ಎಂದ ಗೋವಿಂದ ಕಾರಜೋಳ, ಅ ಸೋತವರಿಗೆ ಮಂತ್ರಿಗಿರಿ ವಿಚಾರ ಅದರ ಬಗ್ಗೆ ಏನು ಮಾತನಾಡಲ್ಲ ಎಂದು ಪ್ರತಿಕ್ರಿಯಿಸಲು ನಿರಾಕರಿಸಿದರು.

Key words: It is -impossible – minister – everyone-DCM- Govinda Karajola ..