ಬೆಳ್ಳಂಬೆಳಿಗ್ಗೆ ಐಟಿ ಶಾಕ್: ಸ್ಟಾರ್ ಗ್ರೂಪ್ ಮಾಲೀಕರ ಮನೆ ,ಕಚೇರಿ ಮೇಲೆ ದಾಳಿ.

ಮಂಡ್ಯ ,ಫೆಬ್ರವರಿ,23,2022(www.justkannada.in): ಬೆಳ್ಳಂಬೆಳಗ್ಗೆ  ಮಂಡ್ಯದಲ್ಲಿ ಸ್ಟಾರ್ ಗ್ರೂಪ್ ಮಾಲೀಕರ ನಿವಾಸ ಮತ್ತು ಕಚೇರಿ ಮೇಲೆ ಆದಾಯ ತೆರಿಗೆ ಇಲಾಖೆ ಅಧಿಕಾರಿಗಳು ದಾಳಿ ನಡೆಸಿ ದಾಖಲೆ ಪರಿಶೀಲನೆ ನಡೆಸುತ್ತಿದ್ದಾರೆ.

ನಾಗಮಂಗಲದಲ್ಲಿ ಸ್ಟಾರ್ ಗ್ರೂಪ್ ಮಾಲೀಕ ಮುರ್ತುಜಾ ಮನೆ, ಕಚೇರಿ, ಪೆಟ್ರೋಲ್ ಬಂಕ್ ಸೇರಿದಂತೆ ವಿವಿಧೆಡೆ ಐಟಿ ಅಧಿಕಾರಿಗಳ ದಾಳಿ ನಡೆಸಿದ್ದು,  ಪರಿಶೀಲನೆ ನಡೆಸಿದ್ದಾರೆ.Continued- IT- attack - educational institutions - third day.

ನಾಗಮಂಗಲ ಪಟ್ಟಣದ ಮಂಡ್ಯ ರಸ್ತೆಯಲ್ಲಿರುವ ಮುರ್ತುಜಾ ಮನೆ, ಕಚೇರಿ. ಮೈಸೂರು ರಸ್ತೆಯಲ್ಲಿರುವ ಪೆಟ್ರೋಲ್ ಬಂಕ್, ಪೌಲ್ಟ್ರಿ ಫಾರಂ, ಫಿಡ್ಸ್ ಕಾರ್ಖಾನೆ ಹಾಗೂ ಪೆಟ್ರೋಲ್ ಬಂಕ್ ಗಳ ಮೇಲೆ ಏಕಕಾಲದಲ್ಲಿ ದಾಳಿ ನಡೆಸಲಾಗಿದೆ. ಸುಮಾರು 10ಕ್ಕೂ ಹೆಚ್ಚು ಅಧಿಕಾರಿಗಳ ತಂಡದಿಂದ ದಾಳಿ ನಡೆಸಲಾಗಿದೆ. ಉದ್ಯಮಿ ಸಹೋದರನ ನಿವಾಸ ಕಚೇರಿ ಮೇಲೂ ದಾಳಿಯಾಗಿದೆ. ಅಮ್ಜಾ.  ಶಹಬಾಜ್ ,ಶೀರೋಜ್ ಮನೆಯಲ್ಲಿ ತಲಾಶ್ ನಡೆಸಿದ್ದಾರೆ.

Key words: IT- attack-mandya