Friday, July 31, 2026

BDA Apartments

Home Crime ಬೆಂಗಳೂರು, ಮೈಸೂರಿನಲ್ಲಿ ಐಟಿ ದಾಳಿ : ಕೋಟ್ಯಾಂತರ ರೂ. ನಗದು ಚಿನ್ನಾಭರಣ ವಶಕ್ಕೆ.

ಬೆಂಗಳೂರು, ಮೈಸೂರಿನಲ್ಲಿ ಐಟಿ ದಾಳಿ : ಕೋಟ್ಯಾಂತರ ರೂ. ನಗದು ಚಿನ್ನಾಭರಣ ವಶಕ್ಕೆ.

ಬೆಂಗಳೂರು,ಮೇ,6,2023(www.justkannada.in): ಬೆಂಗಳೂರು ಹಾಗೂ ಮೈಸೂರು ನಗರದ ಹಲವೆಡೆ ಆದಾಯ ತೆರಿಗೆ ಇಲಾಖೆ ಅಧಿಕಾರಿಗಳು ದಾಳಿ ನಡೆಸಿದ್ದು, ಈ ಕೋಟ್ಯಂತರ ರೂಪಾಯಿ ನಗದು, ಚಿನ್ನಾಭರಣ ವಶಪಡಿಸಿಕೊಂಡಿದ್ದಾರೆ.

ಚುನಾವಣೆಗೆ ಸ್ಪರ್ಧಿಸಿದ ಅಭ್ಯರ್ಥಿಗಳಿಗೆ ಫಂಡಿಂಗ್ ಮಾಡುತ್ತಿದ್ದ ಆರೋಪದ ಮೇಲೆ ನಿನ್ನೆ  ಆದಾಯ ತೆರಿಗೆ ಇಲಾಖೆ ಅಧಿಕಾರಿಗಳು ಬೆಂಗಳೂರು ಮತ್ತು ಮೈಸೂರಿನಲ್ಲಿ ಏಕಕಾಲದಲ್ಲಿ ಹಲವೆಡೆ ದಾಳಿ ನಡೆಸಿದ್ದರು.

ಬೆಂಗಳೂರಿನ  ಶಾಂತಿನಗರ ಕಾಕ್ಸಟೌನ್ ಶಿವಾಜಿನಗರ, ಸದಾಶಿವನಗರ, ಕುಮಾರ ಪಾರ್ಕ್  ವೆಸ್ಟ್ ಸೇರಿ  ಹಲವು ಕಡೆಗಳಲ್ಲಿ ಐಟಿ ದಾಳಿಯಾಗಿತ್ತು. ಈ ವೇಳೆ  20 ಕೋಟಿ ಹಣ ಸೀಜ್  ಮಾಡಲಾಗಿದೆ.  15ಕೋಟಿಗೂ ಹೆಚ್ಚು ನಗದು ಮತ್ತು 5 ಕೋಟಿ ಚಿನ್ನಾಭರಣವನ್ನ ಐಟಿ ಅಧಿಕಾರಿಗಳು ವಶಕ್ಕೆ ಪಡೆದಿದ್ದಾರೆ.

Key words: IT -attack –Bangalore-Mysore