ಡೈರೆಕ್ಷನ್ ಜತೆಗೆ ಮತ್ತೆ ಹೀರೋ ಆಗುತ್ತಿದ್ದಾರೆ ಜೋಗಿ ಪ್ರೇಮ್

ಬೆಂಗಳೂರು, ಅಕ್ಟೋಬರ್ 20, 2022 (www.justkannada.in): ಹಲವು ವರ್ಷಗಳ ನಂತರ ಪ್ರೇಮ್ ಮತ್ತೆ ನಾಯಕ ನಟನಾಗಿ ತೆರೆ ಮೇಲೆ ಮಿಂಚಲು ತಯಾರಿ ನಡೆಸಿದ್ದಾರೆ.

ಯವ ನಿರ್ದೇಶಕ ‘ ಎಂ.ಶಶಿಧರ್ ‘ ಅವರು ಪ್ರೇಮ್ ಗೆ ಆ್ಯಕ್ಸನ್ ಕಟ್ ಹೇಳಲಿದ್ದಾರೆ. ಈ ಮೂಲಕ ಹೊಸ ನಿರ್ದೇಶನನಿಗೆ ಜವಾಬ್ದಾರಿ ಕೊಟ್ಟಿದ್ದಾರೆ.

ಅಂದಹಾಗೆ ಇನ್ನೂ ಹೆಸರಿಡದ ಈ ಚಿತ್ರ ಸೌತ್ ಇಂಡಿಯಾದ ಮೊಟ್ಟ ಮೊದಲ ಜೋಂಬಿ ಚಿತ್ರವಾಗಿದ್ದು, ಸೈಕಾಲಾಜಿಕಲ್ ತ್ರಿಲ್ಲರ್ ಕತೆ ಇರಲಿದೆ.

ಪ್ರೇಮ್ ಅಭಿಮಾನಿಗಳಿಗೆ ಹೊಸ ಅನುಭವ ಕೊಡಲು ಈ ಹಿಂದೆ ಯಾರೂ ತೋರಿಸದ ರೀತಿಯಲ್ಲಿ ಹೊಸ ಲುಕ್ ನಲ್ಲಿ ತೋರಿಸಲು ನಿರ್ದೇಶಕ ಎಂ. ಶಶಿಧರ್ ತುಂಬ ತಯಾರಿ ಮಾಡಿಕೊಂಡಿದ್ದಾರೆ.