ಮೈಸೂರು, ಆ.೨೦,೨೦೨೫: ಮಾಜಿ ಐಪಿಎಸ್ ಅಧಿಕಾರಿ ಕೆಂಪಯ್ಯ ೭೫ ವರ್ಷದ ಸಂಭ್ರಮಾಚರಣೆ ನಡುವೆಯೇ ಹೆಚ್ಚಿನ ಆರೋಗ್ಯ ತಪಾಸಣೆಗಾಗಿ ಅಮೇರಿಕಾಗೆ ಕುಟುಂಬ ವರ್ಗದ ಜತೆ ಮಂಗಳವಾರ ತೆರಳಿದರು.
ವಯೋಸಹಜ ಅನಾರೋಗ್ಯ ಜತೆಗೆ “ಲಿವರ್” ಸಮಸ್ಯೆಯಿಂದ ಬಳಲುತ್ತಿದ್ದ ಕೆಂಪಯ್ಯ ಅವರನ್ನು ಚಿಕಿತ್ಸೆಗೆ ಅಮೇರಿಕಾಗೆ ತೆರಳುವಂತೆ ಮನವೊಲಿಸಿದ್ದು ನಟ ಶಿವರಾಜ್ ಕುಮಾರ್. ಡಾ. ರಾಜ್ ಕುಟುಂಬದ ಜತೆ ಕೆಂಪಯ್ಯ ಉತ್ತಮ ಒಡನಾಟ ಹೊಂದಿದ್ದಾರೆ. ಈ ಹಿನ್ನೆಲೆಯಲ್ಲಿ ಕೆಂಪಯ್ಯ ಅವರನ್ನು ಚಿಕಿತ್ಸೆಗೆ ತೆರಳುವಂತೆ ಬಲವಂತ ಮಾಡಿದ್ದು ನಟ ಶಿವಣ್ಣ.
ಶಿವಣ್ಣರ ಪ್ರೀತಿಗೆ, ಒತ್ತಾಯಕ್ಕೆ ಕಟ್ಟುಬಿದ್ದು ಕೆಂಪಯ್ಯ ಅವರು ಚಿಕಿತ್ಸೆಗೆ ಅಮೇರಿಕಾಗೆ ಆ. ೧೯ ರಂದು ತೆರಳಿದ್ದಾರೆ. ಅವರ ಜತೆಗೆ ಕೆಂಪಯ್ಯ ಅವರ ಕುಟುಂಬ ವರ್ಗದವರು ಸಹ ತೆರಳಿದ್ದಾರೆ .
ಕೆಂಪಯ್ಯ ಹಿನ್ನೆಲೆ:
ಕರ್ನಾಟಕ ಪೊಲೀಸ್ ಇಲಾಖೆಯಲ್ಲಿ ತನ್ನದೇ ಆದ ವಿಶೇಷ ಚಾಪು ಮೂಡಿಸಿದ್ದ ಐಪಿಎಸ್ ಅಧಿಕಾರಿ ಕೆಂಪಯ್ಯ ಅವರನ್ನು ಮೈಸೂರಿಗರು ಅದರಲ್ಲೂ ಮೈಸೂರಿನ ಪೊಲೀಸರು ಮರೆಯುವಂತಿಲ್ಲ. ಇಲ್ಲಿ ಪೊಲೀಸ್ ಆಯುಕ್ತರಾಗಿದ್ದ ವೇಳೆ ಹಲವಾರು ಜನಪರ ಹಾಗೂ ಪೊಲೀಸ್ ಸಿಬ್ಬಂದಿಗಳ ಪರವಾದ ಕಾರ್ಯಗಳನ್ನು ಕೈಗೆತ್ತಿಕೊಂಡು ಜನಮನ್ನಣೆ ಪಡೆದಿದ್ದರು.
ವರನಟ ಡಾ. ರಾಜ್ ಕುಮಾರ್ ಕುಟುಂಬ ವರ್ಗಕ್ಕೂ ಅತ್ಯಂತ ನಿಕಟ ಸಂಪರ್ಕಹೊಂದಿದ್ದರು ಕೆಂಪಯ್ಯ. ಇವರ ಹೆಸರಿನಲ್ಲಿ “ಐಪಿಎಸ್ ಕೆಂಪಯ್ಯ “ ಎಂಬ ಚಲನಚಿತ್ರ ಸಹ ೯೦ ರ ದಸಕದಲ್ಲಿ ನಿರ್ಮಾಣಗೊಂಡಿತ್ತು. ನಟ ಶಶಿಕುಮಾರ್ ಅವರು ಕೆಂಪಯ್ಯನವರ ಪಾತ್ರ ನಿರ್ವಹಿಸಿದ್ದರು.
ಕೆ. ಕೆಂಪಯ್ಯ IPS ವೃತ್ತಿ ಪಯಣ :
ಕೆಂಪಯ್ಯ IPS 1981 ರ ಬ್ಯಾಚಿನಲ್ಲಿ ಸೇರ್ಪಡೆಯಾಗಿದ್ದರು. ವೀರಪ್ಪನ್ ಸೆರೆ ಕಾರ್ಯಚರಣೆಗಾಗಿ ರಚಿಸಿದ್ದ Special Task Force ನೇತೃತ್ವ ವಹಿಸಿದ್ದರು.
ಕೆಂಪಯ್ಯ ಅವರ ನೇತೃತ್ವದಲ್ಲಿ ಬೆಂಗಳೂರು ಹೊರವಲಯದಲ್ಲಿ ಅವಿತಿದ್ದ ರಾಜೀವ್ ಗಾಂಧಿ ಹತ್ಯೆ ಪ್ರಕರಣದ ಪ್ರಮುಖ ಆರೋಪಿ ಶಿವರಸನ್ ಪತ್ತೆ ಹಚ್ಚಲಾಯಿತು.
2009 ರಲ್ಲಿ ಕೆಂಪಯ್ಯ ಅವರು ಸೇವಾ ನಿವೃತ್ತಿ (voluntary retirement) ತೆಗೆದುಕೊಂಡರು. 2014 ರಲ್ಲಿ, ಅವರನ್ನು ಕರ್ನಾಟಕ ಸರಕಾರದ ಗೃಹ ಸಚಿವರಿಗೆ ಸಲಹೆಗಾರ (adviser) ಆಗಿ ನೇಮಿಸಲಾಯಿತು. 2014 ರಿಂದ 2018 ರವರೆಗೆ Kempaiah ಅವರು ಅಧಿಕೃತ ಗೃಹ ಸಚಿವರ ಸಲಹೆಗಾರ ಹುದ್ದೆಯಲ್ಲಿ ಕಾರ್ಯನಿರ್ವಹಿಸಿದರು.
key words: Retired IPS Kempaiah, Off to America, treatment.
SUMMARY:
Retired IPS Kempaiah @ 75: Off to America for treatment.
Former IPS officer Kempaiah left for America with his family on Tuesday for further health check-ups amid the celebrations of his 75th birthday. Kempaiah, who was suffering from age-related ailments and a liver problem, was persuaded to go to America for treatment by actor Shivaraj Kumar. Kempaiah has a good relationship with Dr. Raj’s family. In this context, it was actor Shivanna who forced Kempaiah to go for treatment.