ಐಪಿಎಲ್-2022:  ಪ್ಲೇ ಆಫ್ , ಫೈನಲ್ ಗೆ ಹೊಸ ರೂಲ್ಸ್.

ಮುಂಬೈ,ಮೇ,23,2022(www.justkannada.in): ಐಪಿಎಲ್ 2022 (IPL 202)ರ ಪ್ಲೇ ಆಫ್ ಸುತ್ತು  ನಾಳೆಯಿಂದ ಆರಂಭವಾಗಲಿದ್ದು ಫ್ಲೇಆಫ್ ಮತ್ತು ಫೈನಲ್ ಗೆ ಹೊಸ ನಿಯಮ ಜಾರಿ ಮಾಡಲಾಗಿದೆ.

ಮೊದಲ ಕ್ವಾಲಿಫೈಯರ್‌ ನಲ್ಲಿ ಗುಜರಾತ್ ಟೈಟಾನ್ಸ್ ಮತ್ತು ರಾಜಸ್ಥಾನ್ ರಾಯಲ್ಸ್ , ಬುಧವಾರ ಲಕ್ನೋ-ಬೆಂಗಳೂರು  ನಡುವೆ ಎಲಿಮಿನೇಟರ್ ಪಂದ್ಯ ನಡೆಯಲಿದೆ.

ಐಪಿಎಲ್ 2022 ರ ಹೊಸ ನಿಯಮಗಳ ಪ್ರಕಾರ, ಪ್ಲೇಆಫ್ ಪಂದ್ಯಗಳು ಹವಾಮಾನ ವೈಪರಿತ್ಯಕ್ಕೆ ಸಿಲುಕಿದರೆ ಮತ್ತು ಪಂದ್ಯವನ್ನು ನಿಗದಿತ ಸಮಯಕ್ಕೆ ನಡೆಸಲು ಸಾಧ್ಯವಾಗದಿದ್ದರೆ, ಸೂಪರ್ ಓವರ್ ಮೂಲಕ ವಿಜೇತರನ್ನು ನಿರ್ಧರಿಸಲಾಗುತ್ತದೆ. ಆದರೆ ಸೂಪರ್ ಓವರ್​ ಕೂಡ ಆಡಲಾಗದಿದ್ದರೆ, ಲೀಗ್ ಹಂತದಲ್ಲಿ ಉತ್ತಮ ಪ್ರದರ್ಶನ ನೀಡಿದ ತಂಡವನ್ನು ವಿಜೇತ ಎಂದು ಘೋಷಿಸಲಾಗುತ್ತದೆ ಎಂದು ಬಿಸಿಸಿಐ ತಿಳಿಸಿದೆ.