ಐಪಿಎಲ್ ಸೀಸನ್ 14: 292 ಆಟಗಾರರ ಹರಾಜು ಪಟ್ಟಿ ರೆಡಿ

ಮುಂಬೈ, ಫೆಬ್ರವರಿ 12, 2021 (www.justkannada.in): ಐಪಿಎಲ್ 14 ರಲ್ಲಿ ಹರಾಜಿಗೊಳಗಾಗಲಿರುವ ಆಟಗಾರರ ಅಂತಿಮ ಪಟ್ಟಿ ಸಿದ್ಧಗೊಂಡಿದೆ.

ಹೌದು. ಒಟ್ಟಾರೆ 292 ಆಟಗಾರರ ಹರಾಜು ಪಟ್ಟಿಯನ್ನು ಬಿಸಿಸಿಐ ಸಿದ್ಧಪಡಿಸಿದೆ.

ಈ ಪೈಕಿ 164 ಭಾರತೀಯ ಆಟಗಾರರು, 125 ವಿದೇಶೀ ಆಟಗಾರರು ಇದ್ದಾರೆ. ಫೆಬ್ರವರಿ 18 ರಂದು ಚೆನ್ನೈನಲ್ಲಿ ಹರಾಜು ಪ್ರಕ್ರಿಯೆ ನಡೆಯಲಿದೆ.

ಒಟ್ಟಾರೆ 1,114 ಆಟಗಾರರು ಹರಾಜಿಗೆ ಹೆಸರು ನೊಂದಾಯಿಸಿಕೊಂಡಿದ್ದರು.