ಐಪಿಎಲ್: ಎಲಿಮಿನೇಟರ್ ಪಂದ್ಯದಲ್ಲಿ ಆರ್’ಸಿಬಿ-ಲಖನೌ ಬಿಗ್ ಫೈಟ್

ಬೆಂಗಳೂರು, ಮೇ 25, 2022 (www.justkannada.in): ಐಪಿಎಲ್​​ನಲ್ಲಿ ಇಂದು ಆರ್’ಸಿಬಿ ಪಾಲಿಗೆ ಪ್ರಮುಖ ಪಂದ್ಯ ನಡೆಯಲಿದೆ.

ಇದು ನಾಕಾಟ್​​ ಮ್ಯಾಚ್​. ಇಲ್ಲಿ ಗೆದ್ದವರು ಫೈನಲ್​​ ಸ್ಥಾನಕ್ಕಾಗಿ ಕ್ವಾಲಿಫೈಯರ್​​ 2ರಲ್ಲಿ ಆಡಲಿದ್ದಾರೆ. ಸೋತವರು ಪ್ಯಾಕಪ್​​​ ಮಾಡಿ ಮನೆಗೆ ತೆರಳಿದ್ದಾರೆ!

ಕೊಲ್ಕತ್ತಾದ ಈಡನ್​​ ಗಾರ್ಡನ್​​ನಲ್ಲಿ ನಡೆಯಲಿರುವ ರಾಯಲ್​ ಚಾಲೆಂಜರ್ಸ್​ ಬೆಂಗಳೂರು ಮತ್ತು ಲಖನೌ ಸೂಪರ್​ ಜೈಂಟ್ಸ್​​ ವಿರುದ್ಧದ ಪಂದ್ಯ ಕುತೂಹಲದ ಕೇಂದ್ರಬಿಂದುವಾಗಿದೆ.

ರಾಯಲ್​​ ಚಾಲೆಂಜರ್ಸ್​ ಬೆಂಗಳೂರು ತಂಡ ಅದೃಷ್ಟದ ಮೇಲೆ ಪ್ಲೇ-ಆಫ್​​ ಪ್ರವೇಶಿಸಿದೆ. ಹೀಗಾಗಿ ಎರಡು ತಂಡಗಳ ನಡುವೆ ಹೆಚ್ಚು ಅಂತರವಿಲ್ಲ. ಲಖನೌ ಸೂಪರ್​​ ಜೈಂಟ್ಸ್​​ ಟೂರ್ನಿಯ ಆರಂಭದಲ್ಲಿ ತೋರಿದ ಸ್ಥಿರತೆಯನ್ನು 2ನೇ ಭಾಗದಲ್ಲಿ ತೋರಿಸಿಲ್ಲ.ಹೀಗಾಗಿ ಈ ಪಂದ್ಯ ಸಾಕಷ್ಟು ಕುತೂಹಲ ಮೂಡಿಸಿದೆ.

ಲಖನೌ ಸೂಪರ್​ ಜೈಂಟ್ಸ್​​ ಬ್ಯಾಟಿಂಗ್​​​ ಬಲಿಷ್ಠವಾಗಿದೆ. ಕೆ.ಎಲ್​​. ರಾಹುಲ್​​ ಮತ್ತು ಕ್ವಿಂಟಾನ್​​ ಡಿಕಾಕ್​​  ಆರ್ ಸಿಬಿ ಕಾಡುವ ಸಾಧ್ಯತೆ ಇದೆ.  ಇನ್ನು ರಾಯಲ್​ ಚಾಲೆಂಜರ್ಸ್​ ತಂಡದ ಕಾಂಬಿನೇಷನ್​​ ಬಗ್ಗೆ ಹೆಚ್ಚು ಚರ್ಚೆ ಆಗುತ್ತಿದೆ.