ಭಾರತ –ಪಾಕ್ ಉದ್ವಿಗ್ನ ಪರಿಸ್ಥಿತಿ: IPL ಟೂರ್ನಿ ಮುಂದಿನ ಪಂದ್ಯಗಳು ರದ್ದು

ನವದೆಹಲಿ,ಮೇ,9,2025 (www.justkannada.in):  ಭಾರತ ಮತ್ತು ಪಾಕಿಸ್ತಾನದ ನಡುವೆ ಯುದ್ಧದ ಭೀತಿ ಎದುರಾಗಿದ್ದು ಉದ್ವಿಗ್ನ ಪರಿಸ್ಥಿತಿ  ಉಂಟಾಗಿದೆ. ಈ ಹಿನ್ನೆಲೆಯಲ್ಲಿ ಐಪಿಎಲ್ ಟೂರ್ನಿಯ ಮುಂದಿನ ಪಂದ್ಯಾವಳಿಗಳನ್ನ ಬಿಸಿಸಿಐ ರದ್ದುಗೊಳಿಸಿದೆ.

ಮಾರ್ಚ್ 22ರಿಂದ ಶುರುವಾಗಿದ್ದ ಐಪಿಎಲ್ ಟೂರ್ನಿ ಮೇ 25ಕ್ಕೆ ಮುಕ್ತಾಯವಾಗಬೇಕಿತ್ತು. ಇನ್ನು 16 ಪಂದ್ಯಗಳು ಬಾಕಿ ಉಳಿದಿದ್ದವು. ಆದರೆ ಭಾರತ ಮತ್ತು ಪಾಕಿಸ್ತಾನದ ನಡುವೆ ಉದ್ವಿಗ್ನ ಪರಿಸ್ಥಿತಿ   ಹಿನ್ನೆಲೆ ಇಂದು ಸಭೆ ನಡೆಸಿದ ಬಿಸಿಸಿಐ ಐಪಿಎಲ್ ಪಂದ್ಯಾವಳಿಗಳನ್ನ ರದ್ದುಗೊಳಿಸಿದೆ.

ನಿನ್ನೆ ಧರ್ಮಶಾಲಾದಲ್ಲಿ ನಡೆಯುತ್ತಿದ್ದ ಪಂಜಾಬ್ ಕಿಂಗ್ಸ್ ಮತ್ತು ಡೆಲ್ಲಿ ಕ್ಯಾಪಿಟಲ್ಸ್ ಪಂದ್ಯ ಅರ್ಧಕ್ಕೆ ರದ್ದಾಗಿತ್ತು. ಇದೀಗ ಆಟಗಾರರ ರಕ್ಷಣೆ ದೃಷ್ಟಿಯಿಂದ ಐಪಿಎಲ್ ಟೂರ್ನಿ ರದ್ದುಗೊಳಿಸುವುದಾಗಿ ಬಿಸಿಸಿಐ ಅಧಿಕೃತವಾಗಿ ತಿಳಿಸಿದೆ. ಯುದ್ದ ಪರಿಸ್ಥಿತಿಯಲ್ಲಿ ಆಟವಾಡುವುದು ಸಮಂಜಸವಲ್ಲ ಎಂದು ಬಿಸಿಸಿಐ ಹೇಳಿದೆ.

Key words: India-Pakistan war, IPL tournament,  next matches, cancelled