ಸ್ವಾತಂತ್ರ್ಯ ದಿನಾಚಾರಣೆ ಕಾರ್ಯಕ್ರಮಕ್ಕೆ ವಿಶೇಷ ಅತಿಥಿಗಳಾಗಿ ಒಲಂಪಿಕ್ಸ್ ಕ್ರೀಡಾಪಟುಗಳಿಗೆ ಆಹ್ವಾನ.

ನವದೆಹಲಿ,ಆಗಸ್ಟ್,3,2021(www.justkannada.in): ಜಪಾನ್ ನ ಟೋಕಿಯೊದಲ್ಲಿ ನಡೆಯುತ್ತಿರುವ ಒಲಂಪಿಕ್ಸ್ ನಲ್ಲಿ ಭಾರತೀಯ ಕ್ರೀಡಾಪಟುಗಳು ಭಾಗವಹಿಸಿದ್ದು ಉತ್ತಮ ಪ್ರದರ್ಶನ ನೀಡುತ್ತಿದ್ದಾರೆ. ಈ ನಡುವೆ ಈ ಬಾರಿಯ ಆಗಸ್ಟ್ 15ರ ಸ್ವಾತಂತ್ರ್ಯ ದಿನದ ಸಂಭ್ರಮಾಚರಣೆಗೆ ವಿಶೇಷ ಅತಿಥಿಗಳಾಗಿ ಭಾರತೀಯ ಒಲಂಪಿಕ್ಸ್ ಆಟಗಾರರನ್ನ ಪ್ರಧಾನಿ ಮೋದಿ ಆಹ್ವಾನಿಸಿದ್ದಾರೆ.

ಪ್ರಧಾನ ಮಂತ್ರಿ ನರೇಂದ್ರ ಮೋದಿ, ಭಾರತೀಯ ಒಲಿಂಪಿಕ್ ತುಕಡಿಯನ್ನು ಕೆಂಪು ಕೋಟೆಗೆ ವಿಶೇಷ ಅತಿಥಿಗಳಾಗಿ ಆಹ್ವಾನಿಸಲಿದ್ದಾರೆ. ಆ ಸಮಯದಲ್ಲಿ ಪ್ರಧಾನಿ ಮೋದಿ ಅವರು ಆಟಗಾರರನ್ನು ವೈಯಕ್ತಿಕವಾಗಿ ಭೇಟಿಯಾಗಿ ಸಂವಾದ ನಡೆಸಲಿದ್ದಾರೆ. 119 ಆಟಗಾರರನ್ನು ಒಳಗೊಂಡ ಭಾರತದ 228 ಸದಸ್ಯರ ತಂಡ ಒಲಿಂಪಿಕ್ಸ್ ನಲ್ಲಿ ಪಾಲ್ಗೊಂಡಿದೆ.

ಭಾರತ, ಟೋಕಿಯೊ ಒಲಂಪಿಕ್ಸ್ 2020ರಲ್ಲಿ ಒಂದು ಬೆಳ್ಳಿ ಹಾಗೂ ಒಂದು ಕಂಚಿನ ಪದಕ ಗೆದ್ದಿದೆ. ಭಾರತೀಯ ಒಲಿಂಪಿಕ್ ತಂಡದಲ್ಲಿ ಪಿವಿ ಸಿಂಧು, ಮನು ಭಾಕರ್, ಎಂಸಿ ಮೇರಿ ಕೋಮ್, ಮೀರಾಬಾಯಿ ಚಾನು, ವಿನೇಶ್ ಫೋಗಟ್, ದೀಪಿಕಾ ಕುಮಾರ್ ಸೇರಿದ್ದಾರೆ. ಮೀರಾಬಾಯಿ ಚಾನು ವೇಯ್ಟ್ ಲಿಫ್ಟಿಂಗ್ ʼನಲ್ಲಿ ಬೆಳ್ಳಿ ಮತ್ತು ಪಿವಿ ಸಿಂಧು  ಅವರು ಬ್ಯಾಡ್ಮಿಂಟನ್ʼನಲ್ಲಿ ಕಂಚು ಗೆದ್ದಿದ್ದಾರೆ.

Key words: Invite -Olympic athletes – special guests – Independence Day –PM Modi