Friday, August 14, 2026

BDA Apartments

Home Crime ಅಂತಿಮ ಹಂತದಲ್ಲಿ ರೇಣುಕಾಸ್ವಾಮಿ ಕೊಲೆ ಕೇಸ್ ತನಿಖೆ : ಶೀಘ್ರದಲ್ಲೇ ಚಾರ್ಜ್ ಶೀಟ್-  ಪೊಲೀಸ್ ಆಯುಕ್ತ...

ಅಂತಿಮ ಹಂತದಲ್ಲಿ ರೇಣುಕಾಸ್ವಾಮಿ ಕೊಲೆ ಕೇಸ್ ತನಿಖೆ : ಶೀಘ್ರದಲ್ಲೇ ಚಾರ್ಜ್ ಶೀಟ್-  ಪೊಲೀಸ್ ಆಯುಕ್ತ ದಯಾನಂದ್

ಬೆಂಗಳೂರು,ಆಗಸ್ಟ್,16,2024 (www.justkannada.in): ರೇಣುಕಾಸ್ವಾಮಿ ಕೊಲೆ ಪ್ರಕರಣ ಅಂತಿಮ ಘಟ್ಟಕ್ಕೆ ತಲುಪಿದೆ. ಇನ್ನೂ ಕೆಲವು ಎಫ್ ಎಸ್ ಎಲ್ ವರದಿಗಳು ಬರಬೇಕಿದೆ. ವರದಿ ಬಂದ ನಂತರ ಚಾರ್ಜ್ ಶೀಟ್ ಸಲ್ಲಿಸಲಾಗುತ್ತದೆ ಎಂದು ಬೆಂಗಳೂರು ನಗರ ಪೊಲೀಸ್ ಆಯುಕ್ತ ಬಿ. ದಯಾನಂದ್ ತಿಳಿಸಿದರು.

ಈ ಕುರಿತು ಇಂದು ಮಾತನಾಡಿದ ಪೊಲೀಸ್ ಆಯುಕ್ತ ಬಿ.ದಯಾನಂದ್,  ರೇಣುಕಾಸ್ವಾಮಿ ಕೊಲೆ ಪ್ರಕರಣ ತನಿಖೆ ಅಂತಿಮಘಟ್ಟ ತಲುಪಿದೆ. ಮೌಖಿಕ,  ತಾಂತ್ರಿಕ ಸಾಂದರ್ಭಿಕ ಸಾಕ್ಷಿಯನ್ನ ಸಂಗ್ರಹಿಸಲಾಗಿತ್ತು. ಈಗಾಗಲೇ ಎಫ್ ಎಸ್ ಎಲ್ ನಿಂದ ಶೇ. 70 ರಷ್ಟು ವರದಿಗಳು ಬಂದಿದ್ದು, ಇನ್ನು ಶೇ 30ರಷ್ಟು ವರದಿ ಕೈ ಸೇರಬೇಕಿದೆ . ಎಫ್ ಎಸ್ ಎಲ್ ವರದಿಗಳು ಬಂದ ನಂತರ ಚಾರ್ಜ್ ಶೀಟ್ ಸಲ್ಲಿಸಲಾಗುವುದು ಎಂದರು.

ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಈಗಾಗಲೇ ಆರೋಪಿ ನಟ ದರ್ಶನ್ ಅಂಡ್ ಗ್ಯಾಂಗ್ ನ್ಯಾಯಾಂಗ ಬಂಧನದಲ್ಲಿದ್ದಾರೆ.

Key words: Investigation, Renukaswamy, murder case, final stage, Police Commissioner