ಅಂತರಾಷ್ಟ್ರೀಯ ಮಹಿಳಾ ದಿನಾಚಾರಣೆ: ಕ್ರೀಡಾ ಕೋರ್ಟ್ ಗೆ ತೆರಳಿ  ಆಟಗಾರರಿಗೆ ಶುಭಕೋರಿದ ಸಚಿವ ನಾರಾಯಣಗೌಡ..

ಬೆಂಗಳೂರು ಮಾರ್ಚ್ 8,2021(www.justkannada.in): ಅಂತರಾಷ್ಟ್ರೀಯ ಮಹಿಳಾ ದಿನಾಚಾರಣೆ ಹಿನ್ನೆಲೆಯಲ್ಲಿ ಇಂದು ಕಂಠೀರವ ಕ್ರೀಡಾಂಗಣದಲ್ಲಿ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ   ವತಿಯಿಂದ ವಿಶ್ವ ಮಹಿಳಾ ದಿನಾಚರಣೆ ಕಾರ್ಯಕ್ರಮ ಆಯೋಜಿಸಲಾಗಿತ್ತು.International Women's Day-. Minister -Narayana Gowda -wishes -players

ಕಾರ್ಯಕ್ರಮದಲ್ಲಿ  ಯುವ ಸಬಲೀಕರಣ ಮತ್ತು ಕ್ರೀಡೆ, ಯೋಜನೆ ಮತ್ತು ಸ್ಯಾಂಖಿಕ ಇಲಾಖೆ ಸಚಿವ ಡಾ. ನಾರಾಯಣಗೌಡ  ಅವರು ಮಹಿಳಾ ಬೈಕ್ ರೈಡ್, ಕಾರ್ ರೇಸ್ ಗೆ ಚಾಲನೆ ನೀಡಿದರು. ಬಳಿಕ ಕಂಠೀರವ ಕ್ರೀಡಾಂಗಣದಲ್ಲಿರುವ ವಿವಿಧ ಕ್ರೀಡಾ ಕೋರ್ಟ್ ಗೆ ತೆರಳಿ, ಕ್ರೀಡೆಯಲ್ಲಿ ಪಾಲ್ಗೊಂಡು ಆಟಗಾರರನ್ನು ಹುರಿದುಂಬಿಸಿದರು.International Women's Day-. Minister -Narayana Gowda -wishes -players

ನಂತರ ಸಚಿವ ಡಾ. ನಾರಾಯಣಗೌಡ ಅವರು ಹಾಕಿ  ಸ್ಟೇಡಿಯಂ ಗೆ ತೆರಳಿ ಮಹಿಳಾ ಹಾಕಿ ತಂಡದವರನ್ನ ಭೇಟಿಯಾಗಿ ಮಹಿಳಾ ದಿನಾಚರಣೆಯ ಶುಭಾಶಯ ಕೋರಿದರು. ಒಲಂಪಿಕ್ ಅಸೋಸಿಯೇಶನ್ ಅಧ್ಯಕ್ಷ ಗೋವಿಂದರಾಜು, ಇಲಾಖೆ ಅಪರಮುಖ್ಯ ಕಾರ್ಯದರ್ಶಿ ಡಾ. ಶಾಲಿನಿ ರಜನೀಶ್ ಮತ್ತಿತರ ಪ್ರಮುಖರು ಉಪಸ್ಥಿತರಿದ್ದರು.

Key words: International Women’s Day-. Minister -Narayana Gowda -wishes -players