Friday, August 21, 2026

BDA Apartments

Home Crime ಹಿಂದೂಧರ್ಮೀಯರಿಗೆ ಹೀಯಾಳಿಸಿ ಅಪಮಾನ: ಮುಸ್ಲೀಂ ಯುವಕನ ಬಂಧನ.

ಹಿಂದೂಧರ್ಮೀಯರಿಗೆ ಹೀಯಾಳಿಸಿ ಅಪಮಾನ: ಮುಸ್ಲೀಂ ಯುವಕನ ಬಂಧನ.

ಬೀದರ್,ಜನವರಿ,25,2024(www.justkannada.in): ಹಿಂದೂಧರ್ಮೀಯರಿಗೆ ಹೀಯಾಳಿಸಿ ಅಪಮಾನವೆಸಗಿದ ಮುಸ್ಲೀಂ ಯುವಕನನ್ನ  ತೆಲಂಗಾಣ ಪೊಲೀಸರು ಬಂಧಿಸಿದ್ದಾರೆ.

ಬಂಧಿತನನ್ನು ಅಬ್ಬಾಸ್ ಅಲಿ ಮೊಹಮ್ಮದ್ ರಸೂಲ್ ಎಂದು ಗುರುತಿಸಲಾಗಿದೆ. ಬಂಧಿತ ಯುವಕ ಭಗವಾಧ್ವಜವನ್ನು ಒಳ ಉಡುಪಿನಲ್ಲಿ ಇಟ್ಟುಕೊಂಡು, ಹಿಂದೂ ಧರ್ಮೀಯರನ್ನು ಹೀಯಾಳಿಸಿ ಅಪಮಾನಿಸಿದ್ದ ಎನ್ನಲಾಗಿದೆ. ಯುವಕ ತೆಲಂಗಾಣ ರಾಜ್ಯದ ಸಂಗಾರೆಡ್ಡಿ ಜಿಲ್ಲೆ ನಾರಾಯಣಖೇಡ ತಾಲ್ಲೂಕಿನ ಮೋರಗಿ ಗ್ರಾಮದವನು. ಘಟನೆ ಅದೇ ಗ್ರಾಮದಲ್ಲಿ ನಡೆದಿದ್ದು,  ಈ ಗ್ರಾಮವು ಬೀದರ್ ಗಡಿಗೆ ಹೊಂದಿಕೊಂಡಿದೆ.

ಘಟನೆ ಬೆನ್ನಲ್ಲೇ ಗ್ರಾಮಸ್ಥರು ರಸೂಲ್‌ನ್ನು ಹಿಡಿದು. ವಿವಸ್ತ್ರಗೊಳಿಸಿ ‘ಜೈಶ್ರೀರಾಮ್’ ಎಂದು ಘೋಷಣೆ ಕೂಗುತ್ತ ಹೊಡೆದಿದ್ದಾರೆ. ಅಬ್ಬಾಸ್ ಅಲಿ ಧ್ವಜವನ್ನು ಒಳ ಉಡುಪಿನಲ್ಲಿ ಇಟ್ಟುಕೊಂಡು, ಅವಮಾನಿಸಿ ವಿಡಿಯೋ ಮಾಡಿ ಅದನ್ನು ಸಾಮಾಜಿಕ ಜಾಲತಾಣಗಳಲ್ಲಿ ಹರಿಬಿಟ್ಟಿದ್ದ. ಈ ವಿಷಯವನ್ನು ಬೀದರ್ ತಾಲ್ಲೂಕಿನ ಚಿಲ್ಲರ್ಗಿ ಗ್ರಾಮಸ್ಥರು ಸ್ಥಳೀಯರ ಗಮನಕ್ಕೆ ತಂದಿದ್ದಾರೆ. ಬಳಿಕ ಆತನನ್ನು ವಿವ ಸ್ತ್ರಗೊಳಿಸಿ ಹಲ್ಲೆ ನಡೆಸಲಾಗಿದೆ.

ಆರೋಪಿಯನ್ನು  ನಾಗಲಗಿದ್ದ ಠಾಣೆ ಪೊಲೀಸರು ಬಂಧಿಸಿದ್ದಾರೆ. ಥಳಿಸುತ್ತಿರುವ ವಿಡಿಯೊ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದ್ದು, ಅದು ಬೀದ‌ರ್ ಜಿಲ್ಲೆಗೆ ಸಂಬಂಧಿಸಿದ್ದಲ್ಲ. ಹೆಚ್ಚಿನ ಮಾಹಿತಿ ಕಲೆ ಹಾಕಲು ಜನವಾಡ ಠಾಣೆಯ ಪೊಲೀಸ್ ಇನ್‌ ಸ್ಪೆಕ್ಟರ್ ಅವರನ್ನು ನಾಗಲಗಿದ್ದ ಠಾಣೆಗೆ ಕಳಿಸಿಕೊಡಲಾಗಿದೆ’ ಎಂದು ಎಸ್‌ಪಿ ಚನ್ನಬಸವಣ್ಣ ಎಸ್.ಎಲ್ ಮಾಹಿತಿ ನೀಡಿದ್ದಾರೆ.

Key words: Insulting Hindus- Muslim- youth- arrested.