ಸರಳ ದಸರಾ ಬದಲಿಗೆ ತೋರಿಕೆ ದಸರಾ -ಸರ್ಕಾರದ ವಿರುದ್ದ ಮಾಜಿ ಸಂಸದ ಆರ್.ಧೃವನಾರಾಯಣ್ ಕಿಡಿ

ಮೈಸೂರು,ಅಕ್ಟೋಬರ್,15,2020(www.justkannada.in) : ಕೊರೊನಾ ನಿರ್ವಹಣೆಯಲ್ಲಿ ಸರ್ಕಾರ ಸಂಪೂರ್ಣ ವಿಫಲವಾಗಿದೆ. ಸರಳ ದಸರಾ ಮಾಡಬೇಕಿತ್ತು. ಆದರೆ, ಈ ಸರ್ಕಾರದವರು ತೋರಿಕೆ ದಸರಾ ಮಾಡುತ್ತಿದ್ದಾರೆ ಎಂದು ಮಾಜಿ ಸಂಸದ ಆರ್.ಧೃವನಾರಾಯಣ್ ಕಿಡಿಕಾರಿದ್ದಾರೆ.jk-logo-justkannada-logo

ಮೈಸೂರಿನಲ್ಲಿ ಇಂದು ಮಾತನಾಡಿದ ಮಾಜಿ ಸಂಸದ ಆರ್. ಧೃವನಾರಾಯಣ್,  ಕೊರೊನಾ ಸಂದರ್ಭದಲ್ಲಿ ದಸರಾವನ್ನ ಮನೆ, ಮನೆಯಲ್ಲಿ ಮಾಡಬೇಕಿತ್ತು‌. ದಸರಾಗೆ ಖರ್ಚು ಮಾಡುತ್ತಿರುವ ಹಣವನ್ನ ಕೊರೋನಾ ನಿರ್ವಹಣೆಗೆ ಬಳಸಬಹುದಿತ್ತು. ಆದರೆ ಈ ಸರ್ಕಾರದವರು ಅದನ್ನು ಬಿಟ್ಟು ಬೇರೆ ಮಾಡುತ್ತಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

 Instead-simple-Dasara-2020-government-doing-Dussehra-Former-MP R.Dhruvanarayan 

ಮೈಸೂರಿನಲ್ಲಿ ಕೊರೊನಾ ನಿಲ್ಲುತ್ತಿಲ್ಲ. ಮೈಸೂರು ಜಿಲ್ಲಾಡಳಿತ ಹಾಗೂ ಉಸ್ತುವಾರಿ ಸಚಿವರು ಕೊರೊನಾ ನಿಯಂತ್ರಣ ಮಾಡುವುದರಲ್ಲಿ ವಿಫಲರಾಗಿದ್ದಾರೆ‌. ಸರ್ಕಾರ ಮಾಡದ ಕೆಲಸವನ್ನ ಆರೋಗ್ಯ ಹಸ್ತದ ಮೂಲಕ ಕಾಂಗ್ರೆಸ್ ಪಕ್ಷ ಮಾಡುತ್ತಿದೆ ಎಂದು ತಿಳಿಸಿದರು.

key words : Instead-simple-Dasara-2020-government-doing-Dussehra-Former-MP R.Dhruvanarayan