ಉದ್ಯಾನವನಕ್ಕೆ ಅಧಿಕೃತವಾಗಿ ಡಾ.ವಿಷ್ಣುವರ್ಧನ್ ಹೆಸರಿಡುವಂತೆ ಮೈಸೂರು ಮೇಯರ್ ಗೆ ಮನವಿ…

ಮೈಸೂರು,ಸೆಪ್ಟೆಂಬರ್,23,2020(www.justkannada.in) :  ನಗರದ ಅರಮನೆ ಕೋಟೆ ಆಂಜನೇಯಸ್ವಾಮಿ ಪಕ್ಕದ ಉದ್ಯಾನವನಕ್ಕೆ ಅಧಿಕೃತವಾಗಿ ನಟ ಡಾ.ವಿಷ್ಣುವರ್ಧನ್ ಹೆಸರಿಡುವಂತೆ ಒತ್ತಾಯಿಸಿ ಪಾಥಿ ಫೌಂಡೇಷನ್ ಹಾಗೂ ವಿಷ್ಣುವರ್ಧನ್ ಅಭಿಮಾನಿ ಬಳಗದ ವತಿಯಿಂದ ಮೇಯರ್ ತಸ್ನಿಂ ಗೆ ಮನವಿ ಪತ್ರ ಸಲ್ಲಿಸಲಾಯಿತು.jk-logo-justkannada-logoಬುಧವಾರ ಪಾಥಿ ಫೌಂಡೇಷನ್ ಪಾರ್ಥಸಾರಥಿ, ಡಿಟಿಎಸ್ ಫೌಂಡೇಷನ್ ಡಿಟಿ ಪ್ರಕಾಶ್ ನೇತೃತ್ವದಲ್ಲಿ ಮೇಯರ್ ತಸ್ನೀಂ ಭೇಟಿ ಮಾಡಿ ಉದ್ಯಾನವನಕ್ಕೆ ಅಧಿಕೃತವಾಗಿ ನಟ ಡಾ.ವಿಷ್ಣುವರ್ಧನ್ ಹೆಸರಿಡುವಂತೆ ಹಾಗೂ ಉದ್ಯಾನವನದಲ್ಲಿ ವಿಷ್ಣು ಪ್ರತಿಮೆ ನಿರ್ಮಿಸುವಂತೆ ಮನವಿ ಮಾಡಿದರು.

Insist-park-officially-named-Dr.Vishnuvardhan

key words ; Insist-park-officially-named-Dr.Vishnuvardhan