ದಾಖಲೆ ಹಾಜರುಪಡಿಸಿದರೆ ಗಡ್ಡ ಬೋಳಿಸಿಕೊಳ್ಳುವೆ : ಇಂದ್ರಜಿತ್ ಲಂಕೇಶ್ ಗೆ ಪತ್ರಕರ್ತ ರವಿಬೆಳೆಗೆರೆ ಸವಾಲು

ಬೆಂಗಳೂರು, ಆಗಸ್ಟ್, 29, 2020(www.justkannada.in) ; ನಿರ್ದೇಶಕ ಇಂದ್ರಜಿತ್ ಗೆ ಸಿನಿಮಾ ಮಾಡೋಕೆ ದುಡ್ಡಿಲ್ಲ, ತಲೆ ಮೇಲೆ ಕೂದಲಿಲ್ಲ. ಸ್ಯಾಂಡಲ್ ವುಡ್ ಡ್ರಗ್ಸ್ ಸಂಬಂಧಿಸಿದಂತೆ ಆರೋಪಿಸಿರುವ ಅವರು ದಾಖಲೆಗಳನ್ನು ಹಾಜರುಪಡಿಸಲಿ ಎಂದು ಪತ್ರಕರ್ತ ರವಿಬೆಳಗೆರೆ ಆಕ್ರೋಶವ್ಯಕ್ತಪಡಿಸಿದ್ದಾರೆ.

jk-logo-justkannada-logo

ಸ್ಯಾಂಡಲ್ ವುಡ್ ಡ್ರಗ್ಸ್ ಸಂಬಂಧಿಸಿದಂತೆ ನಿರ್ದೇಶಕ ಇಂದ್ರಜಿತ್ ಹೇಳಿಕೆಯು ಅನೇಕರ ಅಸಮಾಧಾನಕ್ಕೆ ಕಾರಣವಾಗಿದ್ದು, ಅವರು ದಾಖಲೆಗಳನ್ನು ಸಾದರಪಡಿಸಿ ಬಳಿಕ ಮಾತನಾಡಲಿ ಎಂದು ರವಿ ಬೆಳೆಗೆರೆ ಕಿಡಿಕಾರಿದ್ದಾರೆ.

ದಾಖಲೆ ಹಾಜರುಪಡಿಸಿದರೆ ಗಡ್ಡ ಬೋಳಿಸಿಕೊಳ್ಳುವೆ

ಇಂದ್ರಜಿತ್ ಅವರ ತಂದೆ ಲಂಕೇಶ್ ಗೊತ್ತು. ಈ ಇಂದ್ರಜಿತ್ ಕೇಶ್ ಅಂದರೆ ಕೇಶ ಎಂದು ಟೀಕಿಸಿದ್ದಾರೆ. ಸುಮ್ಮನೆ ಗೂಬೆ ಕೂರಿಸುವುದರಲ್ಲಿ ಸರಿಯಲ್ಲ. ಸಾಕ್ಷಿಗಳನ್ನು ಹಾಜರುಪಡಿಸಿದರೆ ಪ್ರೀತಿಯಿಂದ ಬೆಳೆಸಿರುವ ನನ್ನ ಗಡ್ಡವನ್ನು ಬೋಳಿಸುತ್ತೆನೆ ಎಂದು ಸವಾಲು ಹಾಕಿದ್ದಾರೆ.

ಚಲನಚಿತ್ರ ರಂಗದ ಬಗ್ಗೆ ಪ್ರೀತಿ, ಮೋಹವಿದೆ. ಅದು ದೊಡ್ಡ ಸಮೂಹ ಅಂತ ಅನಿಸಿಲ್ಲ. ಅಂಬರೀಷ್, ವಿಷ್ಣುವರ್ಧನ್, ರಾಕೇಶ್ ವೆಂಕಟೇಶ್ ಎಲ್ಲರೂ ನನ್ನ ಗೆಳೆಯರು ನಾವು ಯಾವತ್ತು ಡ್ರಗ್ಸ ಬಗ್ಗೆ ಮಾತನಾಡಿಲ್ಲ ಎಂದು ಹೇಳಿದ್ದಾರೆ.

key words ; Indrajit-no-money-film-no-hair-head-Journalist-Ravibelegere-outraged