ಇಂದಿರಾ ಕ್ಯಾಂಟೀನ್ ಮಾದರಿ ನಿರಾಶ್ರಿತ ಕೇಂದ್ರ ನಿರ್ಮಾಣ: 3 ಸಾವಿರ ನಿರಾಶ್ರಿತರಿಗೆ ಸೌಲಭ್ಯ ಕಲ್ಪಿಸಲು ಚಿಂತನೆ

ಬೆಂಗಳೂರು:ಜೂ-16: ಇಂದಿರಾ ಕ್ಯಾಂಟೀನ್​ಗಳಿಗೆ ಬಳಸಲಾಗಿರುವ ಪ್ರಿ ಫ್ಯಾಬ್ರಿಕೇಟೆಡ್ ಸಾಮಗ್ರಿಗಳನ್ನು ಬಳಸಿ ನಿರಾಶ್ರಿತ ಕೇಂದ್ರಗಳನ್ನು ಸ್ಥಾಪಿಸಲು ಬಿಬಿಎಂಪಿ ನಿರ್ಧರಿಸಿದೆ.

ಈ ಕುರಿತು ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಿರುವ ಪಾಲಿಕೆ, ನಗರದಲ್ಲಿ 3 ಸಾವಿರಕ್ಕೂ ಅಧಿಕ ನಿರಾಶ್ರಿತರಿದ್ದು, ಅವರಿಗೆ ಕೇಂದ್ರಗಳನ್ನು ಸ್ಥಾಪಿಸುವ ಅವಶ್ಯಕತೆಯಿದೆ ಎಂದು ಕೋರಿದೆ. ಬೆಂಗಳೂರಿಗೆ ವಲಸೆ ಬಂದವರು, ರಾತ್ರಿ ಮಲಗಲು ಸ್ಥಳವಿಲ್ಲದವರಿಗೆ ಈ ಕೇಂದ್ರಗಳಿಂದ ಅನುಕೂಲವಾಗಲಿದೆ.

ಖಾಸಗಿ ಸಂಸ್ಥೆಯೊಂದು ಪ್ರಿಫ್ಯಾಬ್ರಿಕೇಟೆಡ್ ಎಲಿಮೆಂಟ್ ಬಳಸಿ ವಾರದೊಳಗೆ ನಿರಾಶ್ರಿತರ ಕೇಂದ್ರ ನಿರ್ವಿುಸಿಕೊಡುವುದಾಗಿ ಪ್ರಸ್ತಾವನೆ ಸಲ್ಲಿಸಿದೆ. ಆ ಹಿನ್ನೆಲೆಯಲ್ಲಿ ಪ್ರಾಯೋಗಿಕವಾಗಿ ಒಂದು ಕಡೆ ನಿರ್ವಿುಸಿ ಯಶಸ್ವಿಯಾದರೆ, ಪಾಲಿಕೆಯಿಂದ ನಿರ್ವಿುಸಲು ಉದ್ದೇಶಿಸಿರುವ ಕೇಂದ್ರಗಳನ್ನು ಪ್ರಿ ಫ್ಯಾಬ್ರಿಕೇಟೆಡ್ ಎಲಿಮೆಂಟ್ ಬಳಸಿಯೇ ನಿರ್ವಿುಸಲು ಯೋಜನೆ ರೂಪಿಸಿದೆ.

ನಗರದಲ್ಲಿರುವ ನಿರಾಶ್ರಿತರಿಗೆ ಅನುಗುಣವಾಗಿ 50 ನಿರಾಶ್ರಿತರ ಕೇಂದ್ರಗಳು ಅಗತ್ಯವಿದ್ದು, ನಲ್ಮ್ ಯೋಜನೆಯಡಿ ಪಾಲಿಕೆಯಿಂದ ನಿರ್ವಿುಸಲು ಉದ್ದೇಶಿಸಲಾಗಿದೆ. ಗೂಡ್​ಶೆಡ್ ರಸ್ತೆ, ಮರ್ಫಿಟೌನ್ ಹಾಗೂ ವಿಜಯನಗರದ ನಿರಾಶ್ರಿತ ಕೇಂದ್ರಗಳು ಉತ್ತಮವಾಗಿ ನಿರ್ವಹಿಸುತ್ತಿದ್ದರೂ ಕಟ್ಟಡಗಳು ಹಳೆಯದಾಗಿವೆ. ಇನ್ನೂ ಕೆಲವು ಕಡೆಗಳಲ್ಲಿ ಬೆಡ್​ಗಳು ಹಳೆಯದಾಗಿರುವುದರಿಂದ ಬದಲಾಗಿಸಬೇಕಾಗಿದೆ. ದೆಹಲಿ ಮಾದರಿಯ ಕೇಂದ್ರಗಳನ್ನು ಸ್ಥಾಪಿಸಲು ತೀರ್ವನಿಸಲಾಗಿದೆ ಎಂದು ವಿಶೇಷ ಆಯುಕ್ತ ರಣದೀಪ್ ಮಾಹಿತಿ ನೀಡಿದರು.
ಕೃಪೆ:ವಿಜಯವಾಣಿ

ಇಂದಿರಾ ಕ್ಯಾಂಟೀನ್ ಮಾದರಿ ನಿರಾಶ್ರಿತ ಕೇಂದ್ರ ನಿರ್ಮಾಣ: 3 ಸಾವಿರ ನಿರಾಶ್ರಿತರಿಗೆ ಸೌಲಭ್ಯ ಕಲ್ಪಿಸಲು ಚಿಂತನೆ

Indira Canteen Model, Homeless Center,3000 refugees