ಭಾರತದ ಶ್ರೀಮಂತ ಸೆಲೆಬ್ರಿಟಿಗಳ ಪಟ್ಟಿ: ವಿರಾಟ್ ಕೊಹ್ಲಿ ಹಿಂದಿಕ್ಕಿದ ನಟ ರಣವೀರ್ ಸಿಂಗ್

ಬೆಂಗಳೂರು, ಮಾರ್ಚ್ 22, 2023 (www.justkannada.in): ಅತ್ಯಂತ ಮೌಲ್ಯಯುತ ಸೆಲೆಬ್ರಿಟಿಗಳ ಪಟ್ಟಿಯಲ್ಲಿ ಬಾಲಿವುಡ್ ನಟ ರಣವೀರ್ ಸಿಂಗ್ ಕ್ರಿಕೆಟಿಗ ವಿರಾಟ್ ಕೊಹ್ಲಿಯನ್ನು ಹಿಂದಿಕ್ಕಿ ಅಗ್ರಸ್ಥಾನಕ್ಕೇರಿದ್ದಾರೆ.

ಸೆಲೆಬ್ರಿಟಿ ಬ್ರಾಂಡ್ ವಾಲ್ಯೂ ರಿಪೋರ್ಟ್ ವರದಿ ಮಾಡಿರುವಂತೆ ಖ್ಯಾತ ಬಾಲಿವುಡ್ ನಟ ರಣವೀರ್ ಸಿಂಗ್ 2022 ರಲ್ಲಿ ಭಾರತದ ಶ್ರೀಮಂತ ಸೆಲೆಬ್ರಿಟಿಯಾಗಿದ್ದಾರೆ.

ಈ ಹಿಂದೆ ಈ ಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿ ಭಾರತೀಯ ಕ್ರಿಕೆಟಿಗ ವಿರಾಟ್ ಕೊಹ್ಲಿಯನ್ನು ಹಿಂದಿಕ್ಕಿದ್ದಾರೆ. ಕಾರ್ಪೊರೇಟ್ ತನಿಖೆ ಮತ್ತು ಅಪಾಯದ ಸಲಹಾ ಸಂಸ್ಥೆ ಕ್ರೋಲ್ ತನ್ನ ವರದಿಯೊಂದರಲ್ಲಿ ಇದನ್ನು ಬಹಿರಂಗಪಡಿಸಿದೆ.

‘ಸೆಲೆಬ್ರಿಟಿ ಬ್ರಾಂಡ್ ವ್ಯಾಲ್ಯುಯೇಶನ್ ರಿಪೋರ್ಟ್ 2022: ಬಿಯಾಂಡ್ ದಿ ಮೈನ್ಸ್ಟ್ರೀಮ್’ ಎಂಬ ಶೀರ್ಷಿಕೆಯ ವರದಿಯ ಪ್ರಕಾರ, $ 181.7 ಮಿಲಿಯನ್ ಬ್ರ್ಯಾಂಡ್ ಮೌಲ್ಯದೊಂದಿಗೆ, ರಣವೀರ್ ಸಿಂಗ್ ವಿರಾಟ್ ಕೊಹ್ಲಿಯನ್ನು ಹಿಂದಿಕ್ಕಿದ್ದಾರೆ. ಟೀಂ ಇಂಡಿಯಾ ನಾಯಕ ಸ್ಥಾನದಿಂದ ಕೆಳಗಿಳಿದ ಬಳಿಕ ವಿರಾಟ್ ಕೊಹ್ಲಿ ಬ್ರ್ಯಾಂಡ್ ಮೌಲ್ಯ ಕಡಿಮೆಯಾಗಿದೆ.