ಉಕ್ರೇನ್ ನಲ್ಲಿ ಭಾರತೀಯರು ಒತ್ತೆಯಾಳು ವಿಚಾರ: ಸ್ಪಷ್ಟನೆ ನೀಡಿದ ಭಾರತೀಯ ರಾಯಭಾರ ಕಚೇರಿ.

ಕೀವ್,ಮಾರ್ಚ್,3,2022(www.justkannada.in): ಉಕ್ರೇನ್ ಮೇಲೆ ರಷ್ಯಾ ಭೀಕರ ದಾಳಿ ಇನ್ನಷ್ಟು ತೀವ್ರಗೊಂಡಿರುವ ನಡುವೆಯೇ ರಷ್ಯಾ ಹಾಗೂ ಉಕ್ರೇನ್ ದೇಶಗಳು ಪರಸ್ಪರ ಆರೋಪ-ಪ್ರತ್ಯಾರೋಪಗಳಲ್ಲಿ  ಮಾಡಿದ್ದು, ಭಾರತೀಯರನ್ನು ರಷ್ಯಾ ಒತ್ತೆಯಾಳಾಗಿ ಇರಿಸಿಕೊಂಡಿದೆ ಎಂದು ಉಕ್ರೇನ್, ಉಕ್ರೇನ್ ಇಂತಹ ಕೃತ್ಯದಲ್ಲಿ  ಭಾಗಿಯಾಗಿದೆ ಎಂದು ರಷ್ಯಾ ವಿದೇಶಾಂಗ ಸಚಿವಾಲಯಗಳು ಆರೋಪಿಸಿವೆ.

ಉಕ್ರೇನ್ ನಲ್ಲಿ ಭಾರತೀಯರು ಒತ್ತಯಾಳಾಗಿದ್ದಾರೆಂಬ ಆರೋಪ ಹಿನ್ನೆಲೆಯಲ್ಲಿ ಈ ಕುರಿತು ಭಾರತೀಯ ರಾಯಭಾರ ಕಚೇರಿ ಸ್ಪಷ್ಟನೆ ನೀಡಿದೆ.  ಉಕ್ರೇನ್ ನಲ್ಲಿ ಭಾರತೀಯರು ಸುರಕ್ಷಿತರಾಗಿದ್ದಾರೆ.  ಭಾರತೀಯರು ಯಾರೂ ಒತ್ತೆಯಾಳಗಿಲ್ಲ. ಈವರೆಗೆ 17 ಸಾವಿರ ಭಾರತೀಯರನ್ನ ವಾಪಸ್ ದೇಶಕ್ಕೆ ಕರೆತರಲಾಗಿದೆ ಎಂದು ಭಾರತೀಯ ರಾಯಭಾರ ಕಚೇರಿ ಮಾಹಿತಿ ನೀಡಿದೆ.

Key words: Indians-hostage – Ukraine-clarified.