ಒಲಂಪಿಕ್ಸ್ ಸೆಮಿಫೈನಲ್ಸ್’ನಲ್ಲಿ ಅರ್ಜೈಂಟೀನಾ ವಿರುದ್ಧ ಭಾರತ ಮಹಿಳಾ ಹಾಕಿ ಹೋರಾಟ ಇಂದು

ಬೆಂಗಳೂರು, ಆಗಸ್ಟ್ 4, 2021 (www.justkannada.in): ಒಲಂಪಿಕ್ಸ್’ನಲ್ಲಿ ಸೆಮಿಫೈನಲ್’ಗೇರಿರುವ ಭಾರತ ಮಹಿಳಾ ಹಾಕಿ ತಂಡ ಇಂದು ಸೆಮಿಫೈನಲ್ ಪಂದ್ಯವಾಡಲಿದೆ.

ಪ್ರಬಲ ಅರ್ಜೈಂಟೀನಾ ತಂಡದ ವಿರುದ್ಧ ಭಾರತ ವನಿತೆಯರು ಸೆಮಿಫೈನಲ್ ನಲ್ಲಿ ಸೆಣಸಲಿದ್ದಾರೆ. ಈಗಾಗಲೇ ಪುರುಷರ ಹಾಕಿ ತಂಡ ಸೆಮಿಫೈನಲ್ ನಲ್ಲಿ ಸೋತು ನಿರಾಸೆ ಉಂಟುಮಾಡಿತ್ತು.

ಭಾರತೀಯ ಕಾಲಮಾನ ಪ್ರಕಾರ ಅಪರಾಹ್ನ 3.30 ಕ್ಕೆ ನಡೆಯಲಿದೆ. ಈ ಪಂದ್ಯವನ್ನು ಗೆದ್ದು ಚಕ್ ದೇ ಇಂಡಿಯಾ ಎನ್ನುತ್ತಾರಾ ಕಾದು ನೋಡಬೇಕಿದೆ.