ನವದೆಹಲಿ,ಮೇ,12,2025 (www.justkannada.in): ಭಾರತ ಮತ್ತು ಪಾಕಿಸ್ತಾನದ ನಡುವೆ ಕದನ ವಿರಾಮ ಘೋಷಣೆಯಾದ ಬೆನ್ನಲ್ಲೇ ಪಾಕ್ ಸೇನೆ ಮತ್ತೆ ಖ್ಯಾತೆ ತೆಗೆದು ದಾಳಿ ಮಾಡಿತ್ತು. ಆದರೆ ಪಾಕ್ ದಾಳಿಗೆ ಭಾರತೀಯ ಸೇನೆ ತಕ್ಕ ಉತ್ತರ ನೀಡಿದ್ದುಈ ಮಧ್ಯೆ ಉಭಯ ರಾಷ್ಟ್ರಗಳ ಸೇನಾ ಕಾರ್ಯಾಚರಣೆಗಳ ಮಹಾ ನಿರ್ದೇಶಕರ (ಡಿಜಿಎಂಒ) ಸಭೆ ಇಂದು ಮಧ್ಯಾಹ್ನ 12 ಗಂಟೆಗೆ ನಡೆಯಲಿದೆ. ಈ ಸಭೆಯಲ್ಲಿ ಮಹತ್ವದ ಚರ್ಚೆಗಳಾಗುವ ಸಾಧ್ಯತೆಗಳಿವೆ.
ಇಂದು ಮಧ್ಯಾಹ್ನ 12 ಗಂಟೆಗೆ ಉಭಯ ಸೇನೆಗಳ ಡಿಜಿಎಂಒಗಳ ನಡುವೆ ಸಭೆ ನಡೆಯಲಿದೆ. ಭಾರತ ಡಿಜಿಎಂಒ ಹಾಗೈ ಲೆಫ್ಟಿನೆಂಟ್ ಜನರಲ್ ,ಪಾಕ್ ನ ಡಿಜಿಎಂಒ ಮೇಜರ್ ಜನರಲ್ ಭಾಗಿಯಾಗಲಿದ್ದಾರೆ.
ಏಪ್ರಿಲ್ 10 ರಂದು ಅಮೇರಿಕ ಮಧ್ಯಸ್ಥಿಕೆ ಮೂಲಕ ಭಾರತ –ಪಾಕಿಸ್ತಾನ ಕದನ ವಿರಾಮ ಘೋಷಣೆಗೆ ಒಪ್ಪಿಗೆ ಸೂಚಿಸಿದ್ದವು. ಆ ಬಳಿಕವೂ ಪಾಕ್ ಸೇನೆ ಮತ್ತೆ ಜಮ್ಮು ಕಾಶ್ಮೀರದಲ್ಲಿ ಡ್ರೋಣ್ ದಾಳಿ ನಡೆಸಿತ್ತು. ಈ ಹಿನ್ನೆಲೆಯಲ್ಲಿ ಭಾರತ ಮತ್ತೆ ಆಪರೇಷನ್ ಸಿಂಧೂರ ಕಾರ್ಯಾಚರಣೆ ಮುಂದುವರೆಸಿ ತಕ್ಕ ಉತ್ತರ ನೀಡಿತ್ತು. ಈ ಮಧ್ಯೆ ಇದೀಗ ನಿನ್ನೆಯಿಂದ ಪಾಕ್ ದಾಳಿ ನಿಲ್ಲಿಸಿದ್ದು ಇಂದು ಉಭಯ ದೇಶಗಳ ನಡುವೆ ಮಾತುಕತೆ ನಡೆಯಲಿದೆ. ಇಂದಿನ ಮಾತುಕತೆ ಬಳಿಕ ಭಾರತ ಮುಂದಿನ ನಡೆ ನಿರ್ಧರಿಸಲಿದೆ.
Key words: Ceasefire, India-Pak, meeting, today