ವಿಪಕ್ಷಗಳ ಮಹಾ ಮೈತ್ರಿಕೂಟಕ್ಕೆ ‘INDIA’ ಹೆಸರು ಫೈನಲ್- ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಘೋಷಣೆ..

ಬೆಂಗಳೂರು,ಜುಲೈ,18,2023(www.justkannada.in): ವಿಪಕ್ಷಗಳ ಮಹಾ ಮೈತ್ರಿಕೂಟಕ್ಕೆ ‘INDIA’ ಹೆಸರು  ಅಂತಿಮಗೊಳಿಸಲಾಗಿದೆ ಎಂದು ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಘೋಷಣೆ ಮಾಡಿದ್ದಾರೆ.

ಇಂದು ಬೆಂಗಳೂರಿನ ತಾಜ್ ವೆಸ್ಟ್ ಎಂಡ್ ಹೋಟೆಲ್ ನಲ್ಲಿ ನಡೆದ ವಿಪಕ್ಷಗಳ ಮಹಾಮೈತ್ರಿ ಕೂಟದ ಸಭೆ ಬಳಿಕ ಸುದ್ಧಿಗೋಷ್ಠಿ ನಡೆಸಿ ಮಾತನಾಡಿದ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ,  ಭಾರತದ ಸಾರ್ವಭೌಮತ್ವ ಕಾಪಾಡುವ ನಿಟ್ಟಿನಲ್ಲಿ ಸಭೆ ನಡೆಸಲಾಗಿದೆ 26 ಪಕ್ಷಗಳ ನಾಯಕರುಸಭೆಯಲ್ಲಿ ಭಾಗಿಯಾಗಿದ್ದರು.  ವಿಪಕ್ಷಗಳ ಮಹಾ ಮೈತ್ರಿಕೂಟಕ್ಕೆ  INDIAN  NATIONAL DEVELOPMENT  INCLUSIVE ALLIANCE(INDIA) ಎಂದು ಹೆಸರು ಫೈನಲ್ ಮಾಡಲಾಗಿದೆ.  ಮಹಾಘಟಬಂಧನ್ ಗೆ ಹೊಸ ಹೆಸರು ಇಡಲಾಗಿದೆ ಎಂದರು.

ಮುಂಬೈನಲ್ಲಿ ಮತ್ತೊಂದು ಸುತ್ತಿನ ಸಭೆ ನಡೆಸಲು ತೀರ್ಮಾನಿಸಲಾಗಿದೆ. 11 ಜನರ  ಕಮಿಟಿ ಮಾಡಲು ನಿರ್ಣಯಿಸಲಾಗಿದೆ. 11 ಜನರ ಹೆಸರನ್ನ ಸದ್ಯದಲ್ಲೇ ಘೋಷಿಸುತ್ತೇವೆ. ಕ್ಯಾಂಪೇನ್ ಮ್ಯಾನೇಜ್ ಮೆಂಟ್ ಗೆ ಕಾರ್ಯದರ್ಶಿ ನೇಮಕ ಮಾಡಲಾಗುತ್ತದೆ.  ದೆಹಲಿಯಲ್ಲಿ ಈ ಬಗ್ಗೆ ನಿರ್ಧಾರ ಕೈಗೊಳ್ಳುತ್ತೇವೆ ಎಂದು ಮಲ್ಲಿಕಾರ್ಜುನ ಖರ್ಗೆ ತಿಳಿಸಿದರು.

ಮೋದಿ ಎನ್ ಡಿಎ ಸಭೆಯನ್ನ ಕರೆದಿದ್ದಾರೆ.  30 ಪಾರ್ಟಿ ಎಲ್ಲಿದ್ದಾವೆ ಅಂತಾ ನಮಗೆ ಗೊತ್ತಿಲ್ಲ. ಚುನಾವಣೆ ಆಯೋಗದಲ್ಲಿ ಪಕ್ಷಗಳ ಹೆಸರು ಇಲ್ಲ. ಅವರ ಜೊತೆಗಿರುವ ಪಕ್ಷಗಳು ತುಕಡೆ ತುಕಡೆ ಆಗಿದೆ. ದೇಶದ ರಕ್ಷಣೆ ನಮ್ಮ ಹೊಣೆ ಅದೇ ನಮ್ಮ ಮೊದಲ ಆದ್ಯತೆ.  ಬಿಜೆಪಿ ಸರ್ಕಾರದ ದೌರ್ಬಲ್ಯ ಎತ್ತಿ ಹಿಡಿಯುವ ಕೆಲಸ ಮಾಡುತ್ತೇವೆ ಎಂದು ಮಲ್ಲಿಕಾರ್ಜುನ ಖರ್ಗೆ ಹೇಳಿದರು.

Key words: INDIA – final- name – Mahaghatabandan – AICC- President -Mallikarjuna Kharge