“ಭಾರತ-ಇಂಗ್ಲೆಂಡ್ ನಡುವಿನ ವಿಮಾನಯಾನ ಇಂದಿನಿಂದ ಆರಂಭ”

ಬೆಂಗಳೂರು,ಜನವರಿ,10,2021(www.justkannada.in) : ಭಾರತ-ಇಂಗ್ಲೆಂಡ್ ನಡುವೆ ಕೊರೊನಾ ರೂಪಾಂತರ ವೈರಸ್ ಕಾಣಿಸಿಕೊಂಡ ಬಳಿಕ ರದ್ದುಮಾಡಲಾಗಿದ್ದ ವಿಮಾನಯಾನವನ್ನು ಇಂದಿನಿಂದ ಆರಂಭಿಸಲಾಗಿದೆ.jk-logo-justkannada-mysore

ಇಂದು ಮುಂಜಾನೆ 4-30ಕ್ಕೆ ಮೊದಲ ವಿಮಾನ ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಬಂದಿಳಿದಿದ್ದು, ಇಂಗ್ಲೆಂಡ್​ನಿಂದ ಈ ವಿಮಾನದಲ್ಲಿ 240 ಪ್ರಯಾಣಿಕರು ಆಗಮಿಸಿದ್ದಾರೆ.

ಏರ್​ಪೋರ್ಟ್ ನಲ್ಲಿ ಸರ್ಕಾರದಿಂದ ಉಚಿತವಾಗಿ ಪ್ರಯಾಣಿಕರಿಗೆ ಆರ್​ಟಿಪಿಸಿಆರ್ ಟೆಸ್ಟ್ ಮಾಡಲಾಗುತ್ತಿದ್ದು, ಟೆಸ್ಟ್ ವರದಿ ಕೈ ಸೇರಲು ಸುಮಾರು 5 ತಾಸು ತೆಗೆದುಕೊಳ್ಳಲಿದೆ.ಟೆಸ್ಟ್ ಮಾಡಿಸಿಕೊಳ್ಳಲು ಪ್ರಯಾಣಿಕರು ತಮ್ಮ ಸರದಿಯಲ್ಲಿ ಕಾಯುತ್ತಿದ್ದಾರೆ. ಸುಮಾರು 30 ಕ್ಕೂ ಅಧಿಕ ಸಿಬ್ಬಂದಿ ಟರ್ಮಿನಲ್ ಒಳಭಾಗದಲ್ಲಿ ನಿಯೋಜನೆಗೊಂಡಿದ್ದು, ಪ್ರಯಾಣಿಕರ ಟೆಸ್ಟ್ ಮಾಡಿಸುತ್ತಿದ್ದಾರೆ.

key words : India-England-Between-Airlines-now-Beginning