ಲಡಾಖ್ ಬಿಕ್ಕಟ್ಟು ವಿಚಾರ: ಪ್ರಧಾನಿ ಮೋದಿಗೆ ಸಲಹೆ ನೀಡಿದ ಮಾಜಿ ಪ್ರಧಾನಿ ಮನ ಮೋಹನ್ ಸಿಂಗ್…  

ನವದೆಹಲಿ,ಜೂ,22,2020(www.justkannada.in):  ಲಡಾಕ್ ನ ಗಲ್ವಾನ್ ಕಣಿವೆಯಲ್ಲಿ ಭಾರತ ಮತ್ತು ಚೀನಾ ನಡುವಿನ ಸಂಘರ್ಷ   ಕುರಿತು ಇದೇ ಮೊದಲ ಬಾರಿಗೆ ಮಾಜಿ ಪ್ರಧಾನಿ ಡಾ ಮನಮೋಹನ್ ಸಿಂಗ್ ಪ್ರತಿಕ್ರಿಯೆ ನೀಡಿದ್ದಾರೆ.

ಲಡಾಖ್ ಬಿಕ್ಕಟ್ಟು ವಿಚಾರ ಕುರಿತು ಪ್ರಧಾನಿ ಮೋದಿಗೆ ಸಲಹೆ ನೀಡಿರುವ ಮನಮೋಹನ್ ಸಿಂಗ್, ಪ್ರಧಾನಿಯಾದವರು ಬಳಸುವ ಪದಗಳ ಬಗ್ಗೆ ಯೋಚಿಸಬೇಕು. ಅವರು ಬಳಸುವ ಪದಗಳಿಂದ ಆಗುವ ಪರಿಣಾಮಗಳ ಬಗ್ಗೆ ಯೋಚಿಸಬೇಕು. ತಾವು ಆಡುವ ಮಾತುಗಳ ಪರಿಣಾಮಗಳನ್ನು ಗಮನದಲ್ಲಿಟ್ಟುಕೊಳ್ಳಬೇಕು ಮತ್ತು ತನ್ನ ಸ್ಥಾನದ ಸಮರ್ಥನೆ ಮಾಡಿಕೊಳ್ಳಲು ಚೀನಾಕ್ಕೆ ಬಿಡಬಾರದು. ತಪ್ಪು ಮಾಹಿತಿ ಕೊಡುವುದು ರಾಜತಾಂತ್ರಿಕತೆ ಅಥವಾ ನಿರ್ಣಾಯಕ ನಾಯಕತ್ವಕ್ಕೆ ಪರ್ಯಾಯವಲ್ಲ ಎಂದು ಹೇಳಿದ್ದಾರೆ.

ನಾವು ಈಗ ಐತಿಹಾಸಿಕ ಕವಲುದಾರಿಯಲ್ಲಿ ನಿಂತಿದ್ದೇವೆ. ಈಗ ತೆಗೆದುಕೊಳ್ಳುವ ತೀರ್ಮಾನದ ಬಗ್ಗೆ ಮುಂದಿಗೆ ಪೀಳಿಗೆ ಗಮನಿಸುತ್ತದೆ. ಪ್ರಧಾನಿ ಮಾತುಗಳು ಎದುರಾಳಿಗಳಿಗೆ ಅಸ್ತ್ರವಾಗಬಾರದು. ರಾಷ್ಟ್ರೀಯ ಭದ್ರತೆಗೆ ಧಕ್ಕೆ ತರುವಂತೆ ಇರಬಾರದು ಎಂದು ಮನ ಮೋಹನ್ ಸಿಂಗ್ ತಿಳಿಸಿದ್ದಾರೆ.india-china-conflict-former-prime-minister-mana-mohan-singh-prime-minister-modi

ಹಾಗೆಯೇ ದೇಶಕ್ಕಾಗಿ ಪ್ರಾಣತೆತ್ತ ಯೋಧರ ಬಲಿದಾನಕ್ಕೆ ನ್ಯಾಯ ಒದಗಿಸಬೇಕು. ಕೇಂದ್ರ ಸರ್ಕಾರ ರಾಷ್ಟ್ರದ ಹಿತಾಸಕ್ತಿಗಾಗಿ ಯಾವುದೇ ನಿರ್ಧಾರ ತಾಳಿದರೂ ಕಾಂಗ್ರೆಸ್​​​ ಬೆಂಬಲಿಸಲಿದೆ. ಗಡಿ ಸುರಕ್ಷತೆ ಹಾಗೂ ದೇಶದ ಸಾರ್ವಭೌಮತ್ವ ಕಾಪಾಡುವ ನಿಟ್ಟಿನಲ್ಲಿ ನಾವು ಕೆಲಸ ಮಾಡಲಿದ್ದೇವೆ  ಎಂದು ಮೋಹನ್ ಸಿಂಗ್ ಹೇಳಿದ್ದಾರೆ.

Key words: india- china-conflict- Former Prime Minister- Mana Mohan Singh- Prime Minister- Modi.