ಬೆಂಗಳೂರು, ಸೆಪ್ಟೆಂಬರ್ 25, 2022 (www.justkannada.in): ಇಂದು ಹೈದ್ರಾಬಾದ್‌ನ ಉಪ್ಪಳ ಮೈದಾನದಲ್ಲಿ ನಡೆಯಲಿರುವ ಪಂದ್ಯದಲ್ಲಿ ಭಾರತ-ಆಸ್ಟ್ರೇಲಿಯಾ ತಂಡಗಳು ಮೂರನೇ ಟೆ-20 ನಿರ್ಣಾಯಕ ಪಂದ್ಯದಲ್ಲಿ ಸೆಣೆಸಾಡಲಿವೆ.
ಮೊನ್ನೆ ಆಸ್ಟ್ರೇಲಿಯಾ ವಿರುದ್ಧದ ಸರಣಿಯನ್ನ ಜೀವಂತವಾಗಿಸಲು ಗೆಲ್ಲಲೇಬೇಕಾದ ಪಂದ್ಯದಲ್ಲಿ ಟೀಂ ಇಂಡಿಯಾ ಗೆದ್ದಿದ್ದಾಗಿದೆ. ಇಂದಿನ ಪಂದ್ಯದಲ್ಲಿ ಗೆದ್ದರೆ ಸರಣಿ ಕೈವಶವಾಗಲಿದೆ.
ಈ ಪಂದ್ಯದಲ್ಲಿ ಟೀಂ ಇಂಡಿಯಾ ಗೆದ್ದರೆ ಟಿ20ಯಲ್ಲಿಯೇ ಹೊಸ ಇತಿಹಾಸ ಬರೆಯಲಿದೆ. ಒಂದು ಕ್ಯಾಲೆಂಡರ್ ವರ್ಷದಲ್ಲಿ ಅತಿ ಹೆಚ್ಚು ಗೆಲುವು ಸಾಧಿಸಿದ ಮೊದಲ ತಂಡ ಎಂಬ ಹೆಗ್ಗಳಿಕೆಗೆ ರೋಹಿತ್ ಟೀಂ ಪಾತ್ರವಾಗಲಿದೆ.
ಕಳೆದ ವರ್ಷ 2021ರಲ್ಲಿ ಬಾಬರ್ ಅಜಂ ನೇತೃತ್ವದ ಪಾಕಿಸ್ತಾನ ತಂಡವು ಒಟ್ಟು 20 ಗೆಲುವು ದಾಖಲಿಸಿ ಈ ಗೌರವ ಪಡೆದ ಮೊದಲ ತಂಡವಾಗಿ ಇತಿಹಾಸ ಸೃಷ್ಟಿಸಿತ್ತು.