ಮೈಸೂರು ದಸರಾ ಗೋಲ್ಡ್ ಕಾರ್ಡ್ ಟಿಕೆಟ್ ಗೆ ಹೆಚ್ಚಾದ ಬೇಡಿಕೆ : ಹೆಚ್ಚಿನ ಆಸನಗಳ ವ್ಯವಸ್ಥೆ : ಆ.22 ರಂದು ಪಾಸ್ ಖರೀದಿಸಲು ಅವಕಾಶ.

ಮೈಸೂರು,ಅಕ್ಟೋಬರ್,21,2023(www.justkannada.in) : ಮೈಸೂರು ದಸರಾ ಜಂಬೂ ಸವಾರಿ ವೀಕ್ಷಣೆಗೆ  ಗೋಲ್ಡ್ ಕಾರ್ಡ್ ಟಿಕೆಟ್ ಗೆ ಬೇಡಿಕೆ ಹೆಚ್ಚಾದ ಹಿನ್ನೆಲೆ ಹೆಚ್ಚಿನ ಆಸನಗಳ ವ್ಯವಸ್ಥೆ ಕಲ್ಪಿಸಿ ಆ.22 ರಂದು ಪಾಸ್ ಖರೀದಿಸಲು ಅವಕಾಶ ನೀಡಲಾಗಿದೆ.

ನಾಡಹಬ್ಬ ಮೈಸೂರು ದಸರಾ 2023 ರ ಅಂಗವಾಗಿ ದೇಶ-ವಿದೇಶಗಳಿಂದ ಆಗಮಿಸುವ ಪ್ರವಾಸಿಗರು ಹಾಗೂ ಸಾರ್ವಜನಿಕ ಅನುಕೂಲಕ್ಕಾಗಿ ದಸರಾ ಜಂಬೂಸವಾರಿ ಮತ್ತು ಪಂಜಿನ ಕಾವಾಯತು ವೀಕ್ಷಣೆಗಾಗಿ ಗೋಲ್ಡ್ ಕಾರ್ಡ್ ಮತ್ತು ಟಿಕೇಟ್ ಗಳನ್ನು ದಿನಾಂಕ:18.10.2023 ರ ಬೆಳಿಗ್ಗೆ 10.00 ಗಂಟೆಯಿಂದ ಆನ್ ಲೈನ್ ಮೂಲಕ ನಿಗಧಿತ ಹಣ ಪಾವತಿಸಿ ಖರೀದಿಸಲು ಅವಕಾಶ ಕಲ್ಪಿಸಲಾಗಿತ್ತು.  ಬಿಡುಗಡೆಗೊಳಿಸಿದ ಕಲವೇ ಗಂಟೆಯೊಳಗೆ ಗೋಡ್ ಕಾರ್ಡ್ ಮತ್ತು ಟಿಕೇಟ್ ಗಳು ಮಾರಾಟವಾಗಿದ್ದವು.

ಆದಾಗ್ಯೂ, ಹೆಚ್ಚಿನ ಸಂಖ್ಯೆಯಲ್ಲಿ ಗೋಲ್ಡ್ ಕಾರ್ಡ್ ಮತ್ತು ಟಿಕೇಟ್ ಗಳ ಬೇಡಿಕೆ ಬರುತ್ತಿರುವ ಹಿನ್ನಲೆಯಲ್ಲಿ ವಿಶ್ವ ವಿಖ್ಯಾತ ಮೈಸೂರು ದಸರಾ 2023 ರ ವೀಕ್ಷಣೆಗೆ ಸಾರ್ವಜನಿಕರಿಗೆ ಅವಕಾಶ ನೀಡುವ ಉದ್ದೇಶದಿಂದ ಹೆಚ್ಚಿನ ಆಸನಗಳ ವ್ಯವಸ್ಥೆ ಕಲ್ಪಿಸಿ ಆಸನಗಳಿಗೆ ಅನುಗುಣವಾಗಿ ದಿನಾಂಕ:22.10.2023 ರಂದು ಬೆಳಿಗ್ಗೆ 10.00 ಗಂಟೆಯಿಂದ ವೆಬ್ ಸೈಟ್ ಮೂಲಕ ಖರೀದಿಸಲು ಅವಕಾಶ ಕಲ್ಪಿಸಲಾಗಿದೆ.ra

 

ದಸರಾ ಜಂಬೂಸವಾರಿ ವೀಕ್ಷಣೆಗೆ ಗೋಲ್ಡ್ ಕಾರ್ಡ್ ಖರೀದಿಸಲು ರೂ.6,000/- ಗಳನ್ನು ಹಾಗೂ ಟಿಕೇಟ್ ಖರೀದಿಸಲು ರೂ.3,000/- ಮತ್ತು ರೂ.2,000/- ಗಳನ್ನು ಹಾಗೂ ಪಂಚಿನ ಕವಾಯಿತು ವೀಕ್ಷಣೆಗೆ ರೂ.500/- ಗಳನ್ನು ಪಾವತಿಸಿ ಖರೀದಿಸಬಹುದಾಗಿದೆ.

ಗೋಡ್ ಕಾರ್ಡ್ / ಟಿಕೇಟ್ ಖರೀದಿಗಾಗಿ ವೆಬ್ ಸೈಟ್ ವಿಳಾಸ mysoredasara.gov.in ಸಂಪರ್ಕಿಸಬಹುದಾಗಿದೆ, ಆನ್ ಲೈನ್ ಹೊರತುಪಡಿಸಿ ಇತರೆ ಯಾವುದೇ ರೀತಿಯಲ್ಲಿ ಗೋಡ್ ಕಾರ್ಡ್ ಮತ್ತು ಟಿಕೇಟ್ ಮಾರಾಟ ಇರುವುದಿಲ್ಲ.

Key words: Increased -demand -Mysore Dussehra- Gold Card –ticket