ಎಸ್.ಸಿ ಮತ್ತು ಎಸ್ ಟಿ ಮೀಸಲಾತಿ ಹೆಚ್ಚಳ : 9 ನೇ ಶೆಡ್ಯೂಲ್ ಗೆ ಸೇರಿಸಲು ಕೇಂದ್ರಕ್ಕೆ ಶಿಫಾರಸ್ಸು ಮಾಡಿ-ಸಿದ್ಧರಾಮಯ್ಯ ಆಗ್ರಹ.

ಬೆಂಗಳೂರು,ಫೆಬ್ರವರಿ,14,2023(www.justkannada.in) ಎಸ್.ಸಿ ಮತ್ತು ಎಸ್ ಟಿ ಮೀಸಲಾತಿ ಹೆಚ್ಚಳ ಸಂಬಂಧ 9 ನೇ ಶೆಡ್ಯೂಲ್ ಗೆ ಸೇರಿಸಲು ಕೇಂದ್ರಕ್ಕೆ ಶಿಫಾರಸ್ಸು ಮಾಡಿ ಎಂದು ಸರ್ಕಾರಕ್ಕೆ ವಿಪಕ್ಷ ನಾಯಕ ಸಿದ್ಧರಾಮಯ್ಯ ಆಗ್ರಹಿಸಿದರು.

ವಿಧಾನಸಭೆಯಲ್ಲಿ ಇಂದು ಮಾತನಾಡಿದ ಸಿದ‍್ಧರಾಮಯ್ಯ,  ಎಸ್.ಸಿ ಮತ್ತು ಎಸ್ ಟಿ ಮೀಸಲಾತಿ ಹೆಚ್ಚಳಕ್ಕೆ 9ನೇ ಶೆಡ್ಯೂಲ್  ಗೆ ಸೇರಿಸಬೇಕು ಎಂದು ನಾವು ಹೇಳಿದ್ದವು. ವಾಲ್ಮಿಕಿ ಸ್ವಾಮೀಜಿ 205 ದಿನಗಳ ಕಾಲ ಹೋರಾಟ ಮಾಡಿದ್ದರು. 9ನೇ ಶೆಡ್ಯೂಲ್ ಗೆ ಸೇರಿಸಲು ಕೇಂದ್ರಕ್ಕೆ ಶಿಫಾರಸ್ಸು ಮಾಡಿಲ್ಲ ಇನ್ನೂ ತೀರ್ಮಾನ ಮಾಡಿಲ್ಲವೆಂದರೆ ನಿಮಗೆ ಇಚ್ಛಾಶಕ್ತಿ ಇಲ್ಲ ಎಂದು ವಾಗ್ದಾಳಿ ನಡೆಸಿದರು.

ಎಸ್ಸಿ ಎಸ್ಟಿ ಮೀಸಲಾತಿ ಹೆಚ್ಚಳ ಸಂವಿಧಾನದಲ್ಲಿ ತಿದ್ದುಪಡಿಯಾಗಿ ಶೆಡ್ಯೂಲ್ 9ಕ್ಕೆ ಸೇರಿದರೇ ಮಾತ್ರ ಅದರ ಅನುಕೂಲಕವಾಗುತ್ತೆ.  ನಮ್ಮನ್ನೂ ಕರೆಯಿರಿ ಒಟ್ಟಾಗಿ ತೆರಳಿ ಕೇಂದ್ರಕ್ಕೆ ಒತ್ತಾಯಿಸೋಣ ಎಂದು ಒತ್ತಾಯಿಸಿದರು.

ರಾಜ್ಯದಲ್ಲಿ ಜನರು ಯಾವಾಗಲೂ ಬಿಜೆಪಿಗೆ ಆಶೀರ್ವಾದ ಮಾಡಿಲ್ಲ ಅಪರೇಷನ್ ಕಮಲ ಮೂಲಕ ಅಧಿಕಾರಕ್ಕೆ ಬಂದಿದೆ.  ಎರಡು ಸಲವೂ ಬಿಜೆಪಿ ಅನೈತಿಕ ಸರ್ಕಾರ ರಚಿಸಿದೆ. ಕೋಟಿಗಟ್ಟಲೇ ಖರ್ಚು ಮಾಡಿ ಅನ್ಯಪಕ್ಷದ ಶಾಸಕರನ್ನ ಖರೀದಿ ಮಾಡಿದ್ದಾರೆ. ರಾಜ್ಯದಲ್ಲಿ 2008 ಮತ್ತು 2018ರಲ್ಲಿ ಬಿಜೆಪಿಗೆ ಬಹುಮತ ಬಂದಿರಲಿಲ್ಲ.  ಬಿಎಸ್ ವೈ ಸರ್ಕಾರ ರಚಿಸಲು ಆಹ್ವಾನ ಕೊಟ್ಟರು ಸರ್ಕಾರ ರಚಿಸಲು ಆಹ್ವಾನ ಕೊಟ್ಟರೂ ಬಹುಮತ ಸಾಬೀತುಪಡಿಸಲಿಲ್ಲ 17 ಶಾಸಕರನ್ನ ಅನೈತಿಕವಾಗಿ ಸೇರಿಸಿಕೊಂಡು ಸರ್ಕಾರ ಮಾಡಿದರು ಬಿಜೆಪಿಯವರಿಗೆ ಸ್ವಲ್ಪವೂ ಮಾನ ಮರ್ಯಾದೆ ಇಲ್ಲ ಎಂದು ಕಿಡಿಕಾರಿದರು.

Key words: Increase – SC and ST –reservation-Center – 9th Schedule-Siddaramaiah