ಗ್ರಾಹಕರಿಗೆ ಮತ್ತೆ ದರ ಏರಿಕೆಯ ಶಾಕ್: ಅಡುಗೆ ಅನಿಲ ಸಿಲಿಂಡರ್ ಗಳ ಬೆಲೆ ಹೆಚ್ಚಳ.

ನವದೆಹಲಿ ,ಆಗಸ್ಟ್,18,2021(www.justkannada.in):  ಅಗತ್ಯ ವಸ್ತುಗಳ ಬೆಲೆ ಏರಿಕೆಯಿಂದ ತತ್ತರಿಸಿರುವ  ಜನರಿಗೆ ಕೇಂದ್ರ ಸರ್ಕಾರ ಮತ್ತೆ ದರ ಏರಿಕೆಯ ಶಾಕ್ ನೀಡಿದೆ. ಹೌದು,  ಸಬ್ಸಿಡಿ ರಹಿತ  ಅಡುಗೆ ಅನಿಲ ಸಿಲಿಂಡರ್ ಬೆಲೆಯನ್ನು ಮತ್ತೆ 25 ರೂ. ಏರಿಕೆ ಮಾಡಲಾಗಿದೆ.

ಜುಲೈ 1ರಂದು ಅಡುಗೆ ಅನಿಲ ಸಿಲಿಂಡರ್ ಗಳ ಬೆಲೆಯನ್ನು 25.50 ರೂ. ಹೆಚ್ಚಳ ಮಾಡಲಾಗಿತ್ತು. ಇದೀಗ ಮತ್ತೆ 25 ರೂ. ಹೆಚ್ಚಳ ಮಾಡಲಾಗಿದೆ. ಈ ಮೂಲಕ ಮತ್ತೆ ಗ್ರಾಹಕರಿಗೆ ದರ ಏರಿಕೆಯ ಬಿಸಿ ತಟ್ಟಿದೆ.

ಬೆಂಗಳೂರಿನಲ್ಲಿ ಅಡುಗೆ ಅನಿಲ ಸಿಲಿಂಡರ್ ದರ 862.5 ರೂ. ಇದೆ.ದೆಹಲಿಯಲ್ಲಿ ಅಡುಗೆ ಅನಿಲ ದರ 859.5 ರೂ. ಇದೆ. ಮುಂಬೈನಲ್ಲಿ 859.5 ರೂ. ಕೋಲ್ಕತ್ತಾದಲ್ಲಿ 886 ರೂ. ಮತ್ತು ಚೆನ್ನೈನಲ್ಲಿ 875.5 ರೂ. ಇದೆ. ಜನವರಿಯಿಂದ ಇಲ್ಲಿವರೆಗೆ ಅಡುಗೆ ಅನಿಲ ಸಿಲಿಂಡರ್ ಬೆಲೆಯನ್ನ 165 ರೂ. ಹೆಚ್ಚಳ ಮಾಡಿದಂತಾಗಿದೆ.

ENGLISH SUMMARY…

Shocker for citizens: Increase in LPG prices again
New Delhi, August 18, 2021 (www.justkannada.in): The Union Government has given a shock to the people of the country who are already suffering from steep increase prices of the essential commodities by increasing the price of LPG cylinder by Rs. 25!
The price of LPG cylinders was increased by Rs.25.50 on July 1. Now again it has been increased to Rs. 25 giving a shock to the people.
The price of an LPG cylinder in Bengaluru is Rs.862.50, in Delhi it is Rs.859.50, in Mumbai Rs.859.50, in Kolkatta Rs.886 and in Chennai Rs.875.50. Thus, the price of LPG cylinder has been increased by Rs. 165 since January!
Keywords: Union Government/ shock/ increase in price/ LPG cylinder

Key words: Increase -price -cooking -gas cylinders