Saturday, September 19, 2026

BDA Apartments

ನಿರೂಪಕ ಅಕುಲ್ ಬಾಲಾಜಿ ಸೇರಿದಂತೆ ಮೂವರಿಗೆ ಸಿಸಿಬಿಯಿಂದ ನೋಟಿಸ್ BDA JK_Adv BDA Adv
Home Cinema ನಿರೂಪಕ ಅಕುಲ್ ಬಾಲಾಜಿ ಸೇರಿದಂತೆ ಮೂವರಿಗೆ ಸಿಸಿಬಿಯಿಂದ ನೋಟಿಸ್

ನಿರೂಪಕ ಅಕುಲ್ ಬಾಲಾಜಿ ಸೇರಿದಂತೆ ಮೂವರಿಗೆ ಸಿಸಿಬಿಯಿಂದ ನೋಟಿಸ್

ಬೆಂಗಳೂರು,ಸೆಪ್ಟೆಂಬರ್, 18,2020(www.justkannada.in) : ನಟ, ನಿರೂಪಕ ಅಕುಲ್ ಬಾಲಾಜಿ ಸೇರಿದಂತೆ ಮೂವರಿಗೆ ಸಿಸಿಬಿ ನೋಟಿಸ್ ನೀಡಿದೆ.

jk-logo-justkannada-logo

ಸ್ಯಾಂಡಲ್ ವುಡ್ ಡ್ರಗ್ಸ್ ಮಾಫಿಯಾ ಸಂಬಂಧಿಸಿದಂತೆ ಮತ್ತೆ ಮೂವರಿಗೆ ಸಿಸಿಬಿ ನೋಟಿಸ್ ನೀಡಿದೆ.  ವಾಟ್ಸಾಪ್ ಮೂಲಕ ನಟ, ನಿರೂಪಕ ಅಕುಲ್ ಬಾಲಾಜಿ ಸೇರಿದಂತೆ ಆರ್. ವಿ.ದೇವರಾಜ್ ಮಗ ಯುವರಾಜ್, ಸಂತೋಷ್ ಗೆ ನೋಟಿಸ್ ಕಳುಹಿಸಿರುವುದಾಗಿ ತಿಳಿದು ಬಂದಿದೆ.

 

 Including-presenter-Akul Balaji-CCB-notice-three

ನಾಳೆ ಬೆಳಿಗ್ಗೆ 10 ಗಂಟೆಗೆ ಸಿಸಿಬಿ ಮುಂದೆ ಹಾಜರಾಗುವಂತೆ ಸೂಚನೆ ನೀಡಲಾಗಿದೆ. ಸ್ಯಾಂಡಲ್ ವುಡ್ ಡ್ರಗ್ಸ್ ದಂಧೆ ಪ್ರಕರಣಕ್ಕೆ ಸಂಬಂಧಿಸಿದಂತೆ ಈಗಾಗಲೇ ನಟಿ ಸಂಜನಾ ಹಾಗೂ ನಟಿ ರಾಗಿಣಿ ನ್ಯಾಯಾಂಗ ಬಂಧನದಲ್ಲಿದ್ದಾರೆ. ಇನ್ನು ನಟ ದಿಗಂತ್ ಹಾಗೂ ನಟಿ ಐಂದ್ರಿತಾ ರೈ ಅವರನ್ನ ಮೊನ್ನೆಯಷ್ಟೇ ಸಿಸಿಬಿ ವಿಚಾರಣೆ ನಡೆಸಿದೆ. ಇದೀಗ ನಟ, ನಿರೂಪಕ ಅಕುಲ್ ಬಾಲಾಜಿ ಸೇರಿದಂತೆ ಮೂವರಿಗೆ ಮತ್ತೆ ಸಿಸಿಬಿ ನೋಟಿಸ್ ನೀಡಿದೆ.

key words : Including-presenter-Akul Balaji-CCB-notice-three