Sunday, August 2, 2026

BDA Apartments

Home Front Page ರಾಷ್ಟ್ರಪತಿಗಳಿಂದ ನಾಡಹಬ್ಬ ದಸರಾ ಉದ್ಘಾಟನೆ ಹೆಮ್ಮೆಯ ವಿಷಯ- ರಾಜವಂಶಸ್ಥ ಯದುವೀರ್.

ರಾಷ್ಟ್ರಪತಿಗಳಿಂದ ನಾಡಹಬ್ಬ ದಸರಾ ಉದ್ಘಾಟನೆ ಹೆಮ್ಮೆಯ ವಿಷಯ- ರಾಜವಂಶಸ್ಥ ಯದುವೀರ್.

ಮೈಸೂರು,ಸೆಪ್ಟಂಬರ್,21,2022(www.justkannada.in): ನಾಡಹಬ್ಬ ಹಬ್ಬ ದಸರಾವನ್ನು ರಾಷ್ಟ್ರಪತಿಗಳು ಉದ್ಘಾಟನೆ ಮಾಡುತ್ತಿರುವುದು ಹೆಮ್ಮೆಯ ವಿಷಯ ಎಂದು ರಾಜವಂಶಸ್ಥ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ಸಂತಸ ವ್ಯಕ್ತಪಡಿಸಿದರು.

ಮೈಸೂರಿನಲ್ಲಿ ಇಂದು ಮಾತನಾಡಿದ  ರಾಜವಂಶಸ್ಥ ಯದುವೀರ್, ಎರಡು ವರ್ಷದ ಬಳಿಕ ಈ ಬಾರಿ ಅದ್ದೂರಿ ದಸರಾ ಆಚರಣೆ ಮಾಡಲಾಗುತ್ತಿದೆ. ಅರಮನೆಯಲ್ಲಿ ಎಂದಿನಂತೆ ಸಂಪ್ರದಾಯಿಕವಾಗಿ ದಸರಾ ಆಚರಿಸಲಾಗುವುದು.

ಚಾಮುಂಡಿಬೆಟ್ಟದಿಂದ ಅರಮನೆಗೆ ರಾಷ್ಟ್ರಪತಿ ಆಹ್ವಾನದ ಬಗ್ಗೆ ರಾಜಮಾತೆ ಅವರು ತೀರ್ಮಾನ ಮಾಡುತ್ತಾರೆ. ಎರಡು ವರ್ಷದ ಬಳಿಕ ಜಂಬುಸವಾರಿ ಅರಮನೆಯಿಂದ  ಹೊರಗಡೆ ತೆರಳುತ್ತಿದೆ. ಸಾರ್ವಜನಿಕರು, ಪ್ರವಾಸಿಗರು ಆನಂದಿಸಿ ಸಂತಸದಿಂದ ಆಚರಿಸಬೇಕು ಎಂದು ತಿಳಿಸಿದರು.

Key words: Inauguration-mysore-dasara-President – pride- Yaduveer