ಕೇಂದ್ರದಿಂದ ರೈಲ್ವೆ ಇಲಾಖೆ ಸುಧಾರಣೆ: ಅಂದಿನ ಯೋಜನೆಗಳಿಗೂ ಹಣ ನೀಡಿದ್ದೇ ಪ್ರಧಾನಿ ಮೋದಿ- ಕೇಂದ್ರ ಸಚಿವ ಸುರೇಶ್ ಅಂಗಡಿ ಹೇಳಿಕೆ…

ಬಳ್ಳಾರಿ,ಅ,17,2019(www.justkannada.in):  ಕೇಂದ್ರ ಸರ್ಕಾರದಿಂದ ರೈಲ್ವೆ ಇಲಾಖೆ ಸುಧಾರಣೆಯಾಗುತ್ತಿದೆ. ಈಗ ಸೆಲ್ಫಿ ತೆಗೆದುಕೊಳ್ಳುವಷ್ಟು ರೈಲ್ವೆ ನಿಲ್ದಾಣಗಳು ಸ್ವಚ್ಛವಾಗಿವೆ ಎಂದು ಕೇಂದ್ರ ರಾಜ್ಯ ರೈಲ್ವೆ ಸಚಿವ ಸುರೇಶ್ ಅಂಗಡಿ ತಿಳಿಸಿದರು.

ಹೊಸಪೇಟೆ –ಹರಿಹರ ರೈಲು ಮಾರ್ಗಕ್ಕೆ ಚಾಲನೆ ನೀಡಿದ ಬಳಿಕ ಮಾತನಾಡಿದ ಕೇಂದ್ರ ಸಚಿವ ಸುರೇಶ್ ಅಂಗಡಿ, ದಶಕದ ಹೋರಾಟಕ್ಕೆ ಇಂದು ಜಯ ಸಿಕ್ಕಿದೆ.  ಪ್ರಧಾನಿ ಮೋದಿ ಸರ್ಕಾರ ರೈಲ್ವೆ ಇಲಾಖೆ ಸುಧಾರಣೆ ಮಾಡುತ್ತಿದೆ. ಈ ಹಿಂದೆ ರೈಲ್ವೆ ನಿಲ್ದಾಣಕ್ಕೆ ಹೋಗ ಬೇಕಾದರೇ ಮೂಗು ಮುಚ್ಚಿಕೊಳ್ಳಬೇಕಿತ್ತು. ಈಗ ಸೆಲ್ಫಿ ತೆಗೆದುಕೊಳ್ಳುವಷ್ಟು ರೈಲ್ವೆ ನಿಲ್ದಾಣಗಳು ಕ್ಲೀನ್ ಆಗಿವೆ ಎಂದು ನುಡಿದರು.

ಹೆಚ್.ಡಿ ದೇವೇಗೌಡ ಹಾಗೂ ಜಾಫರ್ ಶರೀಫ್ ಅವರ ಅವಧಿಯಲ್ಲಿನ ಯೋಜನೆಗಳಿಗೆ ಹಣ ನೀಡಿದ್ದೇ ಪ್ರಧಾನಿ ಮೋದಿ. ಎಲ್ಲಾ ಯೋಜನೆಗಳಿಗೆ ಹಣ ನೀಡಿದ್ದು ಮೋದಿ ಸರ್ಕಾರ. ಶೀಘ್ರವೇ ರಾಜ್ಯದ  ಎಲ್ಲಾ ರೈಲ್ವೆ ಯೋಜನೆಗಳು ಪೂರ್ಣಗೊಳ್ಳಲಿದೆ ಎಂದು ಸುರೇಶ್ ಅಂಗಡಿ ತಿಳಿಸಿದರು.

Key words: Improvement – Railway Department – Center -Union Minister- Suresh angadi