ಗೃಹ ಜ್ಯೋತಿ ಯೋಜನೆ ಜಾರಿ : ನೊಂದಣಿ ದುಪ್ಪಟ್ಟು..

ಬೆಂಗಳೂರು,ಜೂನ್,20,2023(www.justkannada.in): ರಾಜ್ಯ ಸರಕಾರ ಜಾರಿಗೆ ತಂದಿರುವ 200 ಯೂನಿಟ್‌ ವರೆಗ ಉಚಿತ ವಿದ್ಯುತ್‌ ನೀಡುವ ಗೃಹ ಜ್ಯೋತಿ ಯೋಜನೆ  ನೋಂದಣಿ ಕಾರ್ಯ ಎರಡನೇ ದಿನಕ್ಕೆ ಕಾಲಿಟ್ಟಿದ್ದು, ಒಟ್ಟು ಸಂಜೆ 5.30 ಗಂಟೆವರೆಗೆ ಒಟ್ಟು 1, 61, 958 ಗ್ರಾಹಕರು ಯೋಜನೆಗೆ ನೋಂದಣಿ ಮಾಡಿಕೊಂಡಿದ್ದಾರೆ.

ಬೆಂಗಳೂರು ಒನ್‌, ಕರ್ನಾಟಕ ಒನ್‌ ಹಾಗು ಗ್ರಾಮ ಒನ್‌ ಗಳಲ್ಲಿ ನೋಂದಣಿ ನಿರಾತಂಕವಾಗಿ ನಡೆಯಿತು. ಈ ಸಂಖ್ಯೆ ಸೋಮವಾರ ದುಪ್ಟಟ್ಟುಗೊಂಡಿದ್ದು, 1,06,958 ಗ್ರಾಹಕರು ನೋಂದಣಿ ಮಾಡಿಕೊಂಡಿದ್ದಾರೆ ಇದು ಗ್ರಾಹಕರ ಉತ್ಸಾಹವನ್ನು ತೋರಿಸುತ್ತದೆ.

ನೋಂದಣಿ ಪ್ರಕ್ರೀಯೆ ಅತ್ಯಂತ ಸರಳೀಕರಣವಾಗಿದ್ದು, ಗ್ರಾಹಕರು ಯಾವುದೇ ದಾಖಲೆಗಳನ್ನು ನೀಡಬೇಕಾಗಿಲ್ಲ. ಕೇವಲ ವಿದ್ಯುತ್‌ ಸಂಖ್ಯೆಯಲ್ಲಿರುವ ಖಾತೆ ಸಂಖ್ಯೆ, ಗ್ರಾಹಕರ ಆಧಾರ ಸಂಖ್ಯೆ ಹಾಗೂ ಮೊಬೈಲ್‌ ಸಂಖ್ಯೆಯನ್ನಷ್ಟೆ ನಮೂದಿಸಿದರೆ ಸಾಕು.

ನೋಂದಣಿ ಪ್ರಕ್ರೀಯೆ ರಾಜ್ಯದ ಎಲ್ಲಾ ಕರ್ನಾಟಕ ಒನ್, ಗ್ರಾಮ ಒನ್ ಹಾಗೂ ಬೆಂಗಳೂರು ಒನ್ ಕೇಂದ್ರಗಳಲ್ಲಿ ನಡೆಯುತ್ತಿದ್ದು, ಸೇವಾ ಸಿಂಧು ಪೋರ್ಟಲ್ https://sevasindhugs.karnataka.gov.in ಮೂಲಕ ನೋಂದಣಿ ಮಾಡಲಾಗುತ್ತಿದೆ. ನೋಂದಣಿ ಪ್ರಕ್ರಿಯೆಗೆ ಯಾವುದೇ ಗಡುವು ನಿಗದಿಪಡಿಸಲಾಗಿಲ್ಲ, ಆದ್ದರಿಂದ ಗ್ರಾಹಕರು ಆತಂಕ ಪಡುವ ಅಗತ್ಯವಿಲ್ಲ.

Key words: Implementation -Griha Jyoti- Yojana-Registration – double.