ಔರದ್ಕರ್ ವರದಿ ಯಥಾವತ್ ಜಾರಿ ಕಷ್ಟ: ಪೊಲೀಸರಿಗೆ ವಾರದ ರಜೆ ಕೊಡಲು ಕ್ರಮ- ಗೃಹ ಸಚಿವ ಡಾ ಜಿ.ಪರಮೇಶ್ವರ್.

ಮೈಸೂರು,ಜುಲೈ,1,2023(www.justkannada.in): ಔರದ್ಕರ್ ವರದಿ ಯಥಾವತ್ ಜಾರಿ ಕಷ್ಟ. ಪೊಲೀಸರಿಗೆ ವಾರದ ರಜೆ ಕೊಡುವ ಬಗ್ಗೆ ಅಗತ್ಯ ಕ್ರಮ ಕೈಗೊಳ್ಳುತ್ತೇನೆ ಎಂದು ಗೃಹ ಸಚಿವ ಡಾ.ಜಿ.ಪರಮೇಶ್ವರ್ ತಿಳಿಸಿದರು.

ಮೈಸೂರಿನಲ್ಲಿ ಇಂದು ಮಾಧ್ಯಮಗಳ ಜೊತೆ ಮಾತನಾಡಿದ ಗೃಹ ಸಚಿವ ಡಾ.ಜಿ.ಪರಮೇಶ್ವರ್, ಪೊಲೀಸರಿಗೆ ವಾರದ ರಜೆ ಕೊಟ್ಟರೆ ಮಾನಸಿಕ ವಿಶ್ರಾಂತಿ ಸಿಗುತ್ತೆ. ಪೊಲೀಸ್ ಅಧಿಕಾರಿಗಳ ವಾರದ ರಜೆ ಪರವಿದ್ದೇನೆ. ರಾತ್ರಿ ಪಾಳೀ ಮಾಡಿದವರಿಗೆ ವಿಶೇಷ ಭತ್ಯೆ ನೀಡಲು ತೀರ್ಮಾನ ಮಾಡಲಾಗುತ್ತದೆ ಎಂದರು.

ರಾಜ್ಯದ ವಿವಿಧ ಇಲಾಖೆಗಳಲ್ಲಿ 2.50 ಲಕ್ಷ ಹುದ್ದೆ ಖಾಲಿ ಇದೆ. ಖಾಲಿ ಹುದ್ದೆಗಳ ಭರ್ತಿ ಮಾಡುವ ಕಾರ್ಯ ಶುರುವಾಗಿದೆ. ಪೊಲೀಸ್ ಇಲಾಖೆಯಲ್ಲಿ 15 ಸಾವಿರ ಹುದ್ದೆ ಖಾಲಿ ಇದೆ. ಮೊದಲ ಹಂತದಲ್ಲಿ 4 ಸಾವಿರ ಪೊಲೀಸ್ ಕಾನ್ಸ್​ಟೇಬಲ್​​, 400 ಪಿಎಸ್​ಐ ಹುದ್ದೆ ಭರ್ತಿ ಮಾಡಲು ಮುಂದಾಗಿದ್ದೇವೆ ಎಂದು ಗೃಹ ಸಚಿವ ಡಾ.‌ಜಿ.ಪರಮೇಶ್ವರ್ ತಿಳಿಸಿದರು.

Key words: Implementation – Auradkar- report – difficult-Home Minister -Dr. G. Parameshwar.