ಕನ್ನಡ ಬಳಕೆ ಕಡ್ಡಾಯ ನಿಯಮ ಅನುಷ್ಠಾನಕ್ಕೆ ನಾವು ಸಿದ್ಧ- ಸಿಎಂ ಬಸವರಾಜ ಬೊಮ್ಮಾಯಿ.

ಬೆಂಗಳೂರು,ನವೆಂಬರ್,1,2022(www.justkannada.in): ಕನ್ನಡ ಬಳಕೆ ಕಡ್ಡಾಯ ನಿಯಮ ಜಾರಿಗೆ ತರುತ್ತೇವೆ. ಎಲ್ಲರ ಸಲಹೆ ಪಡೆದು ಅನುಷ್ಠಾನಕ್ಕೆ ತರಲು ನಾವು ಸಿದ್ಧ ಎಂದು ಸಿಎಂ ಬಸವರಾಜ ಬೊಮ್ಮಾಯಿ ನುಡಿದರು.

ಕೇಂದ್ರದಿಂದ ಹಿಂದಿ ಹೇರಿಕೆ ಮಾಡಲಾಗುತ್ತಿದೆ ಎಂದು ಆರೋಪಿಸಿದ್ಧ ಶಾಸಕ ರಿಜ್ವಾನ್ ಅರ್ಷದ್ ಗೆ ಕನ್ನಡ ರಾಜ್ಯೋತ್ಸವ ಕಾರ್ಯಕ್ರಮ ವೇದಿಕೆಯ ಮೇಲೆಯೇ ತಿರುಗೇಟು ನೀಡಿದ ಸಿಎಂ ಬಸವರಾಜ ಬೊಮ್ಮಾಯಿ, ಎಲ್ಲಾ ಪ್ರಾದೇಶೀಕ ಭಾಷೆಗಳು ಕೂಡ ರಾಷ್ಟ್ರೀಯ ಭಾಷೆಗಳು. ಹೀಗೆ ನರೇಂದ್ರ ಮೋದಿ ಅವರೇ ಹೇಳಿದ್ದಾರೆ.  ಹೀಗಾಗ ಕನ್ನಡ ಮಾತೃಭಾಷೆ ರಾಷ್ಟ್ರೀಯ ಭಾಷೆಯೂ ಹೌದು ಎಂದರು.

ಡಿಸೆಂಬರ್ ತಿಂಗಳಲ್ಲಿ ವಿಧಾನಸಭೆ ಅಧಿವೇಶನ ನಡೆಯಲಿದೆ.  ಕನ್ನಡ ಬಳಕೆ ಕಡ್ಡಾಯ ನಿಯಮ ಜಾರಿಗೆ ತರುತ್ತೇವೆ. ಈಗಾಗಲೇ ಕನ್ನಡ ಕಡ್ಡಾಯ ಬಿಲ್ ಮಂಡನೆ ಮಾಡಿದ್ದೇವೆ. ಕನ್ನಡ ಭಾಷೆಯ ಬಳಕೆ ಕಾನೂನು ಬದ್ಧವಾಗಲಿದೆ., ಕನ್ನಡಕ್ಕೆ ನಮ್ಮ ಸರ್ಕಾರ ಕಾನೂನಿನ ರಕ್ಷಣೆ ಕವಚ ನೀಡುತ್ತಿದೆ.  ಕಾನೂನಿನ ಬಗ್ಗೆ ವ್ಯಾಖ್ಯಾನವಾಗಲಿ, ಚರ್ಚೆಯಾಗಲಿ. ಎಲ್ಲರ ಸಲಹೆ ಪಡೆದು ಅನುಷ್ಠಾನಕ್ಕೆ ತರುತ್ತೇವೆ. ನವ ಕರ್ನಾಕಟದಿಂದ ನವ ಭಾರತ ಸೃಷ್ಠಿಯಾಗಲಿ ಎಂದು ಸಿಎಂ ಬೊಮ್ಮಾಯಿ ಹೇಳಿದರು.

Key words:  implement – mandatory- Kannada-usage –rule-  CM Basavaraja Bommai.

ENGLISH SUMMARY…

We are ready to implement ‘Compulsory Kannada Usage’: CM Bommai
Bengaluru, November 1, 2022 (www.justkannada.in): Chief Minister Basavaraj Bommai today informed that his government would implement the compulsory Kannada usage rule in the State after getting suggestions from all.
Reacting to MLA Rizwan Arshad’s allegations against the Union Govt. of imposing Hindi, the Chief Minister Bommai expressed his view that all the regional languages are also National languages. “Narendra Modi himself has told this. Therefore, Kannada is our mother tongue as well as national language,” he observed.
“The cabinet session will be held in December. We will make usage of Kannada compulsory. We already have tabled the Compulsory Kannada Usage bill. In the coming days usage of Kannada language will become legal. Our Government is shielding Kannada. Let there be discussions about the law. We will implement it after getting suggestions from all. Let a New Karnataka pave wave for creation of New India,” the CM said.
Keywords: Chief Minister Basavaraj Bommai/ Kannada/ Compulsory usage