ಜೆಎಸ್ ಎಸ್ ಆಯುರ್ವೇದ ಆಸ್ಪತ್ರೆ ವತಿಯಿಂದ  ಇಮ್ಯೂನ್ ಬೂಸ್ಟರ್ ಕಿಟ್ ಬಿಡುಗಡೆ….

ಮೈಸೂರು,ಆ,10,2020(www.justkannada.in):   ರೋಗ ನಿರೋಧಕ ಶಕ್ತಿ ಹೆಚ್ಚಿಸುವ ಆಯುರ್ವೇದ ಔಷಧಿಗಳನ್ನೊಳಗೊಂಡ ಇಮ್ಯೂನ್ ಬೂಸ್ಟರ್ ಕಿಟ್ ಅನ್ನ  ಮೈಸೂರಿನ ಜೆಎಸ್ಎಸ್ ಆಸ್ಪತ್ರೆ ವತಿಯಿಂದ  ಬಿಡುಗಡೆ ಮಾಡಲಾಯಿತು.jk-logo-justkannada-logo

ಮೈಸೂರಿನ ಚಾಮುಂಡಿ ಬೆಟ್ಟದ ತಪ್ಪಲಿನಲ್ಲಿರುವ ಸುತ್ತೂರು ಶಾಖ ಮಠದಲ್ಲಿ ನಡೆದ ಕಾರ್ಯಕ್ರಮದಲ್ಲಿ ಸುತ್ತೂರು ಮಠದ ಶ್ರೀಗಳು ಇಮ್ಯೂನ್ ಬೂಸ್ಟರ್ ಕಿಟ್ ಅನ್ನ ಬಿಡುಗಡೆ ಮಾಡಿದರು.immune-booster-kit-released-jss-ayurvedic-hospital-suttur-sri

ಈ ಇಮ್ಯೂನ್ ಬೂಸ್ಟರ್ ಕಿಟ್ ನಲ್ಲಿ ರೋಗ ನೀರೊಧಕ ಶಕ್ತಿ ಹೆಚ್ಚಿಸುವ ಆಯುರ್ವೇದ ಔಷಧಿಗಳಿರುತ್ತವೆ.  ಚ್ಯವನಪ್ರಾಶ, ಹರಿದ್ರಾರಸ, ಕಷಾಯ ಚೂರ್ಣ, ರಕ್ಷೋಘ್ನ ಧೂಪ, ಅಣುತೈಲ ಆಯುರ್ವೇದ ಔಷಧಿಗಳನ್ನ ಈ ಕಿಟ್ ಒಳಗೊಂಡಿದೆ. ಈ ಕಿಟ್ ಅನ್ನ ಕೊರೋನಾ ತಡೆಗೆ ಮತ್ತು ಕರೋನಾ ಸೋಂಕಿತರು ಇಮ್ಯೂನ್ ಹೆಚ್ಚಿಸಿಕೊಳ್ಳಲು ಬಳಸಬಹುದಾಗಿದೆ.

Key words: Immune Booster- Kit -Released – JSS -Ayurvedic Hospital-suttur sri