ಬಂಧಿತ ಎನ್ ಎಸ್ ಯು ಐ ಕಾರ್ಯಕರ್ತರನ್ನು ಕೂಡಲೇ ಬಿಡುಗಡೆ ಮಾಡದಿದ್ದರೇ ಉಗ್ರ ಹೋರಾಟ- ಸರ್ಕಾರಕ್ಕೆ ಎಚ್ಚರಿಕೆ.

ಮೈಸೂರು,ಜೂನ್,3,2022(www.justkannada.in): ಶಿಕ್ಷಣ ಸಚಿವ ಬಿ ಸಿ ನಾಗೇಶ್ ನಿವಾಸಕ್ಕೆ ಮುತ್ತಿಗೆ ಹಾಕಿ ಪ್ರತಿಭಟನೆ ನಡೆಸಿದ್ದಕ್ಕೆ ಬಂಧಿಸಿರುವ ಎನ್ ಎಸ್ ಯು ಐ ಕಾರ್ಯಕರ್ತರನ್ನ ಕೂಡಲೇ ಬಿಡುಗಡೆ ಮಾಡುವಂತೆ ಎನ್ ಎಸ್ ಯು ಐ ಮೈಸೂರು ನಗರ ಘಟಕ ಆಗ್ರಹಿಸಿದೆ.

ಮೈಸೂರಿನಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಸಂಘಟನೆಯ ಮೈಸೂರು ನಗರ ಅಧ್ಯಕ್ಷ ಎನ್ ಮನೋಜ್, ಶಿಕ್ಷಣ ಸಚಿವರ ಮುತ್ತಿಗೆ ಹಾಕಲು ಯತ್ನಿಸಿದವರನ್ನು ಬಂಧಿಸಿರುವುದನ್ನು ಎನ್ ಎಸ್ ಯು ಐ ಮೈಸೂರು ನಗರ ಘಟಕ ಖಂಡಿಸುತ್ತದೆ. ಆಡಳಿತರೂಢ ಬಿಜೆಪಿ ದ್ವೇಷ ರಾಜಕಾರಣ ಮಾಡುತ್ತಿದೆ. ವಿದ್ಯಾರ್ಥಿ ನಾಯಕರನ್ನು ಬೆದರಿಸುವ ಏಕೈಕ ಉದ್ದೇಶದಿಂದ ಎನ್ ಎಸ್ ಯು ಐ ವಿರುದ್ಧ ಸುಳ್ಳು ಆರೋಪಗಳನ್ನು ಮಾಡಲಾಗಿದೆ.

ಬಂಧನಕ್ಕೊಳಗಾಗಿರುವ ಎನ್ ಎಸ್ ಯು ಐ ಕಾರ್ಯಕರ್ತರನ್ನು ಕೂಡಲೇ ಬಿಡುಗಡೆ ಮಾಡಬೇಕು. ಇಲ್ಲದಿದ್ದರೆ ರಾಜ್ಯಾದ್ಯಂತ ಉಗ್ರ ಪ್ರತಿಭಟನೆ ನಡೆಸುವುದಾಗಿ ಮನೋಜ್ ಎಚ್ಚರಿಕೆ ನೀಡಿದರು.

Key words: immediate-release – arrested -NSUI –activists- Warning – Government.