ಕಬಿನಿ ಬಳಿ ಅಕ್ರಮ ರೆಸಾರ್ಟ್: ಡಿಸಿಎಂಗೆ ವಕೀಲ ರವಿಕುಮಾರ್ ದೂರು.

ಮೈಸೂರು,ಮೇ,21,2025 (www.justkannada.in): ಮೈಸೂರು ಜಿಲ್ಲೆ ಹೆಚ್.ಡಿ.ಕೋಟೆಯ ಕಬಿನಿ ಹಿನ್ನೀರಿನಲ್ಲಿ ಅಕ್ರಮ ರೆಸಾರ್ಟ್ ಗಳು ಕಂಡು ಬಂದಿವೆ. ಈ ಅಕ್ರಮ ರೆಸಾರ್ಟ್ ಗಳ ವಿರುದ್ದ ಕ್ರಮ ಕೈಗೊಳ್ಳುವಂತೆ ಡಿಸಿಎಂ ಡಿಕೆ ಶಿವಕುಮಾರ್ ಅವರಿಗೆ ವಕೀಲ ರವಿಕುಮಾರ್ ದೂರು ಸಲ್ಲಿಕೆ ಮಾಡಿದ್ದಾರೆ.

ಫ್ಯಾಕ್ಸ್ ಮೂಲಕ ಡಿಸಿಎಂ ಡಿ.ಕೆ.ಶಿವಕುಮಾರ್ ಅವರಿಗೆ ವಕೀಲ ವಿ.ರವಿಕುಮಾರ್ ದೂರು ರವಾನೆ ಮಾಡಿದ್ದಾರೆ. ನಾಲ್ಕು ದಿನಗಳ ಹಿಂದೆ ಕಬಿನಿ ರೆಸಾರ್ಟ್ ನಲ್ಲಿ ಡಿಸಿಎಂ ಡಿಕೆ ಶಿವಕುಮಾರ್ ವಾಸ್ತವ್ಯ ಹೂಡಿದ್ದರು. ಈ ವೇಳೆ ಅಕ್ರಮ ರೆಸಾರ್ಟ್ ಗಳಿದ್ದರೆ ಕ್ರಮಕೈಗೊಳ್ಳುವುದಾಗಿ ಡಿಕೆ ಶಿವಕುಮಾರ್  ಭರವಸೆ ನೀಡಿದ್ದರು. ಅಕ್ರಮ ರೆಸಾರ್ಟ್ ಗಳ ಪಟ್ಟಿ ಕೊಟ್ಟರೆ ಕ್ರಮ ತೆಗೆದುಕೊಳ್ಳುವುದಾಗಿ ಡಿಕೆ ಶಿವಕುಮಾರ್  ವಾಗ್ದಾನ ನೀಡಿದ್ದರು.

ಈ ಹಿನ್ನೆಲೆಯಲ್ಲಿ ಇದೀಗ 15 ಕ್ಕೂ ಹೆಚ್ಚು ರೆಸಾರ್ಟ್ ಗಳನ್ನ ಪತ್ತೆ ಹಚ್ಚಿ ಅವುಗಳು ಅಕ್ರಮ ರೆಸಾರ್ಟ್ ಅಂತ ವಕೀಲ ರವಿಕುಮಾರ್ ಪತ್ರ ಬರೆದಿದ್ದಾರೆ. ಲೋಕಾಯುಕ್ತ ಅಧಿಕಾರಿಗಳು, ಪ್ರಾದೇಶಿಕ ಆಯುಕ್ತರು, ಅಪರ ಮುಖ್ಯ ಕಾರ್ಯದರ್ಶಿ, ಕಂದಾಯ ಇಲಾಖೆ ಕಾರ್ಯದರ್ಶಿ, ಸರ್ಕಾರದ ಕಾರ್ಯದರ್ಶಿ, ಪೊಲೀಸ್ ಮಹಾ ನಿರ್ದೇಶಕರು, ಅರಣ್ಯ ಮತ್ತು ಪರಿಸರ ಇಲಾಖೆ ಕಾರ್ಯದರ್ಶಿ, ಕಾವೇರಿ ನೀರಾವರಿ ನಿಗಮದ ವ್ಯವಸ್ಥಾಪಕ ನಿರ್ದೇಶಕರು, ಡೈರೆಕ್ಟರ್ ಜನರಲ್ ಅಂಡ್ ಇನ್ಸ್ ಪೆಕ್ಟರ್ ಜನರಲ್ ಆಫ್ ಪೊಲೀಸ್, ಕಾರ್ಮಿಕ ಇಲಾಖೆ ಸೇರಿ ಹಲವರಿಗೆ ರವಿಕುಮಾರ್ ಪತ್ರ ಬರೆದು ಕ್ರಮ ಕೈಗೊಳ್ಳಲು ಮನವಿ ಮಾಡಿದ್ದಾರೆ.

Key words: Illegal Resort, near, Kabini, complains, DCM