• Home
  • News
  • Politics
  • Crime
  • Cinema
  • Media Masala
  • Rasayana
  • Tenders
  • Mysuru
    • Essential Services in Mysuru
    • Mysore PIN Codes
  • Subscribe
  • Checkout
Search
Monday, February 2, 2026
Sign in
Welcome! Log into your account
Forgot your password? Get help
Privacy Policy
Password recovery
Recover your password
A password will be e-mailed to you.
Just Kannada – Online Kannada News | Breaking Kannada News | Karnataka News | Live Updates | ಕನ್ನಡ ನ್ಯೂಸ್ | ಜಸ್ಟ್ ಕನ್ನಡ
  • Home
  • News
  • Politics
  • Crime
  • Cinema
  • Media Masala
  • Rasayana
  • Tenders
  • Mysuru
    • Essential Services in Mysuru
    • Mysore PIN Codes
  • Subscribe
  • Checkout
Home Front Page ಅಕ್ರಮ ಖಾತೆ ಆರೋಪ: ಸಂಪೂರ್ಣ ಸುಳ್ಳು, ಆಧಾರ ರಹಿತವಾದದು– ಆನಂದ್
  • Front Page
  • News

ಅಕ್ರಮ ಖಾತೆ ಆರೋಪ: ಸಂಪೂರ್ಣ ಸುಳ್ಳು, ಆಧಾರ ರಹಿತವಾದದು– ಆನಂದ್

By
prashanth
-
02/02/2026
Facebook
Twitter
Pinterest
WhatsApp

    ಮೈಸೂರು,ಫೆಬ್ರವರಿ,2,2026 (www.justkannada.in):  ತಾಲ್ಲೂಕಿನ ಕೇತಹಳ್ಳಿ ಗ್ರಾಮದ ಸರ್ವೇ ನಂ. 35/3 ರಲ್ಲಿರುವ 5 ಗುಂಟೆ ಜಾಗಕ್ಕೆ ಸಂಬಂಧಿಸಿದಂತೆ ರಾಜಮ್ಮ ಮತ್ತು ಅವರ ಮಗ ಮಹದೇವಸ್ವಾಮಿ ಅವರು ಅಕ್ರಮ ಖಾತೆ ಮಾಡಿಕೊಟ್ಟಿದ್ದಾರೆ ಎಂಬ ಆರೋಪಗಳು ಸಂಪೂರ್ಣ ಸುಳ್ಳು ಹಾಗೂ ಆಧಾರ ರಹಿತವಾಗಿವೆ ಎಂದು ಬಾಗಳಿ ಮಾದಪ್ಪನವರ ಮರಿ ಮೊಮ್ಮಗ ಆನಂದ್ ಹೇಳಿದರು.

    ತಿ. ನರಸೀಪುರ ತಾಲ್ಲೂಕು ಕಾರ್ಯನಿರತ ಪತ್ರಕರ್ತರ ಸಂಘದ ಕಚೇರಿಯಲ್ಲಿ ಪತ್ರಿಕಾಗೋಷ್ಠಿ ನಡೆಸಿ ಮಾತನಾಡಿದ ಅವರು,  ಸದರಿ ಜಾಗವನ್ನು ತಮ್ಮ ಕುಟುಂಬ ನಾಲ್ಕು ತಲೆಮಾರಿನಿಂದ ನಿರಂತರವಾಗಿ ಸ್ವಾಧೀನದಲ್ಲಿಟ್ಟುಕೊಂಡಿದ್ದು, 2001ರಲ್ಲಿ ತಹಶೀಲ್ದಾರ್ ಆದೇಶ ಹಾಗೂ ಸಹಾಯಕ ಆಯುಕ್ತರ ನ್ಯಾಯಾಲಯದ ತೀರ್ಪಿನಂತೆ ಕಾನೂನುಬದ್ಧವಾಗಿ ಖಾತೆ ಮಾಡಿಸಿಕೊಂಡಿರುವುದಾಗಿ ತಿಳಿಸಿದರು.

    ಈ ಸಂಬಂಧ ರಾಜಮ್ಮ ಅವರು ಸಲ್ಲಿಸಿದ್ದ ಮೇಲ್ಮನವಿ ಸಹಾಯಕ ಆಯುಕ್ತರ ನ್ಯಾಯಾಲಯದಲ್ಲಿ ವಿಚಾರಣೆಗೆ ಒಳಗಾಗಿ ವಜಾಗೊಂಡಿದೆ, ಇದನ್ನೆಲ್ಲಾ ತಿಳಿದಿದ್ದರೂ ಸಹ ರಾಜಮ್ಮ ಹಾಗೂ ಅವರ ಪುತ್ರ ಮಹದೇವಸ್ವಾಮಿ ಅವರು ರೆವಿನ್ಯೂ ಅಧಿಕಾರಿಗಳು ಮತ್ತು ಗ್ರಾಮ ಲೆಕ್ಕಾಧಿಕಾರಿಗಳಿಗೆ ಲಕ್ಷಾಂತರ ರೂಪಾಯಿ ಲಂಚ ನೀಡಿ ರಾತ್ರೋ ರಾತ್ರಿ ಅಕ್ರಮವಾಗಿ ಖಾತೆ ಮಾಡಿಸಿಕೊಂಡಿದ್ದಾರೆ ಎಂದು ಪತ್ರಕರ್ತರಿಗೆ ಸುಳ್ಳು ಮಾಹಿತಿ ನೀಡಿದ್ದಾರೆ ಎಂದು ಆರೋಪಿಸಿದರು.

    ವಾಸ್ತವವಾಗಿ, 2024ರ ಜುಲೈ 18ರಂದು ಖಾತೆ ಸಂಬಂಧ ಅರ್ಜಿ ಸಲ್ಲಿಸಲಾಗಿದ್ದು, ಸಲ್ಲಿಸಿದ ದಾಖಲೆಗಳನ್ನು ಪರಿಶೀಲಿಸಿ, ಗ್ರಾಮಸ್ಥರಿಂದ ಮಾಹಿತಿ ಪಡೆದು, ಸಂಬಂಧಪಟ್ಟ ಅಧಿಕಾರಿಗಳು ಕಾನೂನುಬದ್ಧವಾಗಿ ಕ್ರಮ ಕೈಗೊಂಡಿದ್ದಾರೆ. ಇದರಲ್ಲಿ ಯಾವುದೇ ಅಕ್ರಮ ನಡೆದಿಲ್ಲ ಎಂದು ಅವರು ಸ್ಪಷ್ಟಪಡಿಸಿದರು. ಹೀಗಿರುವಾಗ, ಅಧಿಕಾರಿಗಳ ಮೇಲೂ ಹಾಗೂ ತಮ್ಮ ಕುಟುಂಬದ ಮೇಲೂ ಸುಳ್ಳು ಆರೋಪಗಳನ್ನು ಮಾಡಿರುವ ರಾಜಮ್ಮ ಹಾಗೂ ಅವರ ಪುತ್ರ ಮಹದೇವಸ್ವಾಮಿ ವಿರುದ್ಧ ಕಾನೂನು ಮೂಲಕ ಸೂಕ್ತ ಉತ್ತರ ನೀಡಲಾಗುವುದು, ಅಲ್ಲದೆ 1ಕೋಟಿ  ಮಾನನಷ್ಟ ಮೊಕ್ಕದಮ್ಮೆ ಹೂಡಲಾಗುವುದು ಎಂದು ಎಚ್ಚರಿಸಿದರು.

    ಪತ್ರಿಕಾಗೋಷ್ಠಿಯಲ್ಲಿ ಬಾಗಳಿ ಮಾದಪ್ಪ ರವರ ಮೊಮ್ಮಗ ಕೆ.ಎಂ.ಶಿವಮೂರ್ತಿ ಹಾಜರಿದ್ದರು.

    Key words: Illegal Account, Allegation, Totally, Baseless , Anand, Mysore

    • TAGS
    • Allegation
    • Anand
    • Baseless
    • Illegal Account
    • Mysore.
    • Totally
    Facebook
    Twitter
    Pinterest
    WhatsApp
      Previous articleಒಣ ಘೋಷಣೆಯಿಂದ ಕೂಡಿರುವ, ಜನವಿರೋಧಿ ಕೇಂದ್ರ ಬಜೆಟ್- ಹೆಚ್.ಎ ವೆಂಕಟೇಶ್.
      Next articleಸದನದಲ್ಲಿ ಗುತ್ತಿಗೆದಾರರ ಬಾಕಿ ಬಿಲ್ ಬಗ್ಗೆ ಪ್ರಸ್ತಾಪ: ಸರ್ಕಾರಕ್ಕೆ ಆರ್.ಅಶೋಕ್ ಚಾಟಿ
      prashanth

      RELATED ARTICLESMORE FROM AUTHOR

      ರಾಜ್ಯಕ್ಕೆ ರೈಲು ಬಿಟ್ಟ ನಿರ್ಮಲಾ ಸೀತಾರಾಮನ್: ಬಜೆಟ್‌ ನಲ್ಲಿ ಕರ್ನಾಟಕದ ನಿರ್ಲಕ್ಷ್ಯ- ಕೆ.ವಿ. ಮಲ್ಲೇಶ್ ಟೀಕೆ

      ಸದನದಲ್ಲಿ ಗುತ್ತಿಗೆದಾರರ ಬಾಕಿ ಬಿಲ್ ಬಗ್ಗೆ ಪ್ರಸ್ತಾಪ: ಸರ್ಕಾರಕ್ಕೆ ಆರ್.ಅಶೋಕ್ ಚಾಟಿ

      ಒಣ ಘೋಷಣೆಯಿಂದ ಕೂಡಿರುವ, ಜನವಿರೋಧಿ ಕೇಂದ್ರ ಬಜೆಟ್- ಹೆಚ್.ಎ ವೆಂಕಟೇಶ್.

      Sponsor Ads 1

      Sponsor Ads 2

      Sponsor Ads 3

      Sponsor Ads 4

      EDITOR PICKS

      BREAKING NOW: ಉದಯಗಿರಿ “ ಪ್ರಚೋಧನಕಾರಿ ಪೋಸ್ಟ್‌ “: ಜಾಮೀನು ಕೋರಿ ಕೋರ್ಟ್‌ ಮೊರೆ...

      13/02/2025

      5 ವರ್ಷದಲ್ಲಿ 20 ಲಕ್ಷ ಉದ್ಯೋಗ : ನೂತನ ಕೈಗಾರಿಕಾ ನೀತಿ ಬಿಡುಗಡೆ ಮಾಡಿದ...

      11/02/2025

      ಜಾಗತಿಕ ಹೂಡಿಕೆದಾರರ ಸಮಾವೇಶ : 12 ವಿಶೇಷ ಹೂಡಿಕೆ ವಲಯ ಸ್ಥಾಪನೆ: ಸಚಿವ ಎಂ...

      11/02/2025

      POPULAR POSTS

      ಪಬ್ಲಿಕ್ ಟಿವಿ ಸಂಪಾದಕ ರಂಗನಾಥ್ ಕಾಲೆಳೆದ ವಿಡಿಯೋ ವೈರಲ್ ಮಾಡಿದ್ದು ಸರಿನಾ..?

      30/03/2020

      ಈ ದಂಪತಿ ನೋಡಿ ಮೈಸೂರಿನ ದೇವರಾಜ ಮಾರುಕಟ್ಟೆ ವ್ಯಾಪಾರಿಗಳಿಗೆ ಭಾನುವಾರ ಬೆಳ್ಳಂಬೆಳಗ್ಗೆ ಶಾಕ್..!

      16/06/2019

      ಇಂತವರಿಂದ ಪಕ್ಷ ಕಟ್ಟಿ ಬೆಳೆಸಲು ಸಾಧ್ಯವಿಲ್ಲ: ಮೈಸೂರಿನಲ್ಲೆ ಪಕ್ಷದಿಂದ ಉಚ್ಚಾಟಿಸುತ್ತೇನೆ- ಪರೋಕ್ಷ ಆಕ್ರೋಶ ವ್ಯಕ್ತಪಡಿಸಿದ...

      05/01/2021

      POPULAR CATEGORY

      • Front Page46018
      • News46004
      • Politics27089
      • Crime4387
      • Cinema3641
      • Sports1367
      • Tenders497
      • Media Masala456
      Just Kannada
      ABOUT US
      Just Kannada is a global platform for all issues related to Kannada. At the very root, it’s a news-driven portal. Everything that’s happening in Karnataka, or whatever that’s happening anywhere in the world that has any consequence to Karnataka, is updated here every minute.
      Contact us: info@justkannada.in
      • Terms & Conditions
      • Privacy Policy
      • Refund Policy
      • Grievances
      • Statistics
      • Contact

      Copyright © 2017- . All Rights Reserved: Just Kannada - News 24x7 | Hosted by: DIGICUBE SOLUTIONS

      Subscribe to our News Service @ Just Rs. 399/- per Year and Get Daily Updates Directly to Your Mobile Phones     Subscribe Now | Checkout