Sunday, August 23, 2026

BDA Apartments

Home Cinema ನಟ ಸೂರ್ಯನ ಮೇಲೆ ಹಲ್ಲೆ ನಡೆಸಿದರೆ 1 ಲಕ್ಷ ರೂ. ಇನಾಮು ! ಕಿಡಿಗೇಡಿಗಳ ಘೋಷಣೆ

ನಟ ಸೂರ್ಯನ ಮೇಲೆ ಹಲ್ಲೆ ನಡೆಸಿದರೆ 1 ಲಕ್ಷ ರೂ. ಇನಾಮು ! ಕಿಡಿಗೇಡಿಗಳ ಘೋಷಣೆ

ಬೆಂಗಳೂರು, ನವೆಂಬರ್ 16, 2021 (www.justkannada.in): ನಟ ಸೂರ್ಯನ ಮೇಲೆ ಹಲ್ಲೆ ನಡೆಸಿದರೆ 1 ಲಕ್ಷ ರೂಪಾಯಿ ನೀಡುವುದಾಗಿ ಕಿಡಿಗೇಡಿಗಳು ಘೋಷಿಸಿಸಿದ್ದಾರೆ.

ಸೂರ್ಯ ಅಭಿನಯದ ಜೈ ಭೀಮ್ ಚಿತ್ರ ಅಮೆಜಾನ್ ಪ್ರೈಮ್ ನಲ್ಲಿ ಧೂಳೆಬ್ಬಿಸಿದೆ. ಓಟಿಟಿ ಇತಿಹಾಸದಲ್ಲಿಯೇ ಗರಿಷ್ಠ ಅಂಕ ಪಡೆದು ವೀಕ್ಷಕರನ್ನು ತನ್ನತ್ತ ಸೆಳೆಯುತ್ತಿದೆ.

ಬುಡಕಟ್ಟು ಜನಾಂಗದ ಮೇಲೆ ನಡೆದ ದೌರ್ಜನ್ಯ, ಕ್ರೌರ್ಯದ ಕಥಾ ಹಂದರವನ್ನು ಹೊಂದಿರುವ ಸಿನಿಮಾ ಇದೀಗ ವಿವಾದದ ಮೇಲೆ ವಿವಾದಕ್ಕೆ ಕಾರಣವಾಗಿದೆ.

ವನ್ನಿಯಾರ್ ಜಾತಿಯ ಜನರನ್ನು ಅಪಮಾನಿಸಲಾಗಿದೆ ಎಂದು ಆರೋಪಗಳು ಕೇಳಿ ಬಂದಿದ್ದು, ನಟ ಸೂರ್ಯನ ಮೇಲೆ ಹಲ್ಲೆ ನಡೆಸಿದರೆ 1 ಲಕ್ಷ ರೂಪಾಯಿ ನಗದು ಬಹುಮಾನ ನೀಡಲಾಗುವುದು ಎಂದು ಕಿಡಿಗೇಡಿಗಳು ಘೋಷಿಸಿದ್ದಾರೆ.

ಚಿತ್ರತಂಡದ ವಿರುದ್ಧ ಕ್ರಮಕ್ಕೆ ಆಗ್ರಹಿಸಿ ಪಿಎಂಕೆ ಪಕ್ಷದ ಕಾರ್ಯಕರ್ತರು, ಮುಖಂಡರು ಮೈಲಾಡುತುರೈ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.