ದುಬೈ, ಜುಲೈ 08, 2019 (www.justkannada.in): ಐಸಿಸಿ ನೂತನ ಶ್ರೇಯಾಂಕಿತ ಪಟ್ಟಿಯಲ್ಲಿ ವಿರಾಟ್ ಕೊಹ್ಲಿ ಮೊದಲ ಸ್ಥಾನದಲ್ಲಿ ಮುಂದುವರೆದಿದ್ದಾರೆ.
ಕೊಹ್ಲಿ 442 ರನ್ ಗಳನ್ನು ಕಲೆ ಹಾಕಿದ್ದು 63.14ರ ಸರಾಸರಿ ಹೊಂದಿದ್ದಾರೆ. ಅಲ್ಲದೆ 891 ಅಂಕಗಳೊಂದಿಗೆ ಮೊದಲ ಸ್ಥಾನದಲ್ಲಿ ಮುಂದುವರೆದಿದ್ದಾರೆ.
ರೋಹಿತ್ ಶರ್ಮ ಮತ್ತು ಕೊಹ್ಲಿ ನಡುವಿನ ಅಂಕಗಳ ಅಂತರ ಇದೀಗ ಕಡಿಮೆಯಾಗಿದೆ. ವಿಶ್ವಕಪ್ ನಲ್ಲಿ ದಾಖಲೆಯ ಮೇಲೆ ದಾಖಲೆ ಬರೆಯುತ್ತಿರುವ ರೋಹಿತ್ ಶರ್ಮಾ ಐದು ಶತಕ ಬಾರಿಸುವ ಮೂಲಕ , 885 ಅಂಕ ಗಳಿಸಿದ್ದಾರೆ.






