ಐಸಿಸಿ ಏಕದಿನ ವಿಶ್ವಕಪ್ ಕ್ರಿಕೆಟ್: ಪುಣೆಯಲ್ಲಿ ಟೀಂ ಇಂಡಿಯಾ-ಬಾಂಗ್ಲಾ ಫೈಟ್

ಬೆಂಗಳೂರು, ಅಕ್ಟೋಬರ್ 19, 2023 (www.justkannada.in): ಐಸಿಸಿ ಏಕದಿನ ವಿಶ್ವಕಪ್‌ನ 17ನೇ ಪಂದ್ಯದಲ್ಲಿ ಭಾರತ ತಂಡವು ಬಾಂಗ್ಲಾದೇಶ ವಿರುದ್ಧ ತನ್ನ 4ನೇ ಪಂದ್ಯವಾಡಲಿದೆ.

ಹವಾಮಾನ ವರದಿಯ ಪ್ರಕಾರ, ಪುಣೆಯ ಎಂಸಿಎ ಸ್ಟೇಡಿಯಂನಲ್ಲಿ 2023ರ ವಿಶ್ವಕಪ್ ಪಂದ್ಯಕ್ಕಾಗಿ ಮಬ್ಬಾದ ಆದರೆ, ಸ್ಪಷ್ಟವಾದ ಹವಾಮಾನ ಇರಲಿದೆ.

ಗುವಾಹಟಿ ಮತ್ತು ತಿರುವನಂತಪುರಂನಲ್ಲಿ ನಡೆದ ಎರಡೂ ಅಭ್ಯಾಸ ಪಂದ್ಯಗಳು ರದ್ದಾದ ನಂತರ, 2023ರ ವಿಶ್ವಕಪ್‌ನ ಲೀಗ್ ಹಂತದ ಪಂದ್ಯಗಳಲ್ಲಿ ಮಳೆ ಬಿದ್ದಿಲ್ಲ. ಆದರೆ ಪುಣೆ ಪಂದ್ಯದಲ್ಲಿ ಕೊಂಚ ಮಳೆ ಸಾಧ್ಯತೆ ಇದೆ.

ಆಡಿದ ಮೂರು ಪಂದ್ಯಗಳಲ್ಲಿ ಗೆದ್ದಿರುವ ಟೀಂ ಇಂಡಿಯಾ ಬಾಂಗ್ಲಾದೇಶ ವಿರುದ್ಧ ಜಯದ ಸರಣಿ ಮುಂದುವರಿಸುವ ವಿಶ್ವಾಸದಲ್ಲಿದೆ.